ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯಲ್ಲಿ BCA ವಿದ್ಯಾರ್ಥಿನಿ ನಮಿತಾ ಮೃತದೇಹ ಪತ್ತೆ

ಹಂಚಿಕೊಳ್ಳಿ
WhatsApp Facebook X Telegram
BCA Student Namitha Found Dead in Hucharayaswamy Lake in Shikaripura
BCA Student Namitha Found Dead in Hucharayaswamy Lake in Shikaripura

ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ಶಿಕಾರಿಪುರ ನಗರದಲ್ಲೊಂದು ಬೇಸರದ ಘಟನೆಯೊಂದು ನಡೆದು ಹೊಗಿದೆ. ಇಲ್ಲಿನ ಹುಚ್ಚರಾಯಸ್ವಾಮಿ ಕೆರೆಯಲ್ಲಿ 22 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಂಡಳೇ!? ಅಥವಾ ಇನ್ನೇನಾದ್ರೂ ನಡೆಯಿತೆ? ಇನ್ನಷ್ಟೆ ಗೊತ್ತಾಗಬೇಕಿದೆ.

ಹುಚ್ಚರಾಯಸ್ವಾಮಿ ಕೆರೆಯಲ್ಲಿ ಸಂಭವಿಸಿದ ಘಟನೆ

ಮೃತ ವಿದ್ಯಾರ್ಥಿನಿಯನ್ನು ನಮಿತಾ (22) ಎಂದು ಗುರುತಿಸಲಾಗಿದೆ. ನಮಿತಾ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ BCA ವ್ಯಾಸಂಗ ಮಾಡುತ್ತಿದ್ದರು. ಇಂದು ಹುಚ್ಚರಾಯಸ್ವಾಮಿ ಕೆರೆಯಲ್ಲಿ ನಮಿತಾ ಅವರ ಮೃತದೇಹ ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿವೆ.

ವಿದ್ಯಾರ್ಥಿನಿಯ ಸಾವಿಗೆ ಕಾರಣವೇನು, ಯಾವ ಸಂದರ್ಭದಲ್ಲಿ ಅವರು ಕೆರೆಗೆ ಬಂದಿದ್ದರು ಎಂಬುದು ಸೇರಿದಂತೆ ಘಟನೆಗೆ ಸಂಬಂಧಿಸಿದ ವಿವರಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor