ಶಿವಮೊಗ್ಗ: ಜಿಲ್ಲೆಯಾದ್ಯಂತ ಗಣೇಶೋತ್ಸವದ ಸಂಭ್ರಮ ಶುರುವಾಗುತ್ತಿದ್ದು, ಶಾಂತಿ-ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಖಡಕ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಇದರ ಜೊತೆಗೆ ಮಲೆನಾಡು ಭಾಗದ ಇಂದಿನ ಪ್ರಮುಖ ಘಟನೆಗಳು, ಕ್ರೀಡೆ, ಸಮಾಜಿಕ ಲೇಖನಗಳು ಹಾಗೂ ಪ್ರಚಲಿತ ವಿದ್ಯಮಾನಗಳ ಮುಖ್ಯಾಂಶಗಳು ಇಂತಿವೆ
1. ಗಣೇಶೋತ್ಸವಕ್ಕೆ ಶಿವಮೊಗ್ಗ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ – DJ, ಬೈಕ್ ರ್ಯಾಲಿ ನಿಷೇಧ!
ಶಿವಮೊಗ್ಗ ಜಿಲ್ಲೆಯಲ್ಲಿ ಸೆಪ್ಟೆಂಬರ್ 14ರಿಂದ ಆರಂಭವಾಗುವ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ 30 ದಿನಗಳ ಕಾಲ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ. ಮೆರವಣಿಗೆಯಲ್ಲಿ DJ, ಸಿಡಿಮದ್ದು, ಬೈಕ್ ರ್ಯಾಲಿ ಸಂಪೂರ್ಣ ನಿಷೇಧಿಸಲಾಗಿದ್ದು, ಬಂದೋಬಸ್ತ್ಗಾಗಿ ಖುದ್ದು SP ನಿಖಿಲ್ ಬಿ. ಅವರು ಫೀಲ್ಡ್ಗೆ ಇಳಿದು ಪರಿಶೀಲನೆ ನಡೆಸಿದ್ದಾರೆ.
2. ಗಾಯಗೊಂಡ ಚಿರತೆ ರಕ್ಷಣೆ ವೇಳೆ ಅರಣ್ಯಾಧಿಕಾರಿ ಮೇಲೆಯೇ ದಾಳಿ!
ದಾವಣಗೆರೆ ತಾಲೂಕಿನ ಕೊಕ್ಕನೂರು ಬಳಿ ಕಾರು ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆಯನ್ನು ರಕ್ಷಿಸಲು ಹೋದ ಅರಣ್ಯ ಇಲಾಖೆ ಅಧಿಕಾರಿಯ ಮೇಲೆ ಚಿರತೆ ದಿಢೀರ್ ದಾಳಿ ನಡೆಸಿದೆ. ಗಾಯಗೊಂಡ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆನಂತರ ಚಿರತೆಗೆ ಎರಡನೇ ಬಾರಿಗೆ ಅರವಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.
3. ಲಯನ್ ಸಫಾರಿಯಲ್ಲಿ ಚಾಮುಂಡಿಯ ವಂಶದ ಕುಡಿಗಳು ಇನ್ನು ನೆನಪು ಮಾತ್ರ
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿದ್ದ ಪ್ರಸಿದ್ಧ ‘ಚಾಮುಂಡಿ’ ಹುಲಿಯ ವಂಶದ ಕುಡಿಯಾದ 17 ವರ್ಷದ ‘ದಶಮಿ’ ಹುಲಿ ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಪಾರ್ಶ್ವವಾಯುವಿನಿಂದಾಗಿ ಸಾವನ್ನಪ್ಪಿದೆ. ಇದರೊಂದಿಗೆ ಪ್ರವಾಸಿಗರ ಆಕರ್ಷಣೆಯಾಗಿದ್ದ ಹಳೆಯ ಹುಲಿಗಳ ವಂಶದ ಕೊಂಡಿಯೊಂದು ಕಳಚಿದಂತಾಗಿದೆ.
4. ಸೆಪ್ಟೆಂಬರ್ 10 ಮತ್ತು 11 ರಂದು ಶಿವಮೊಗ್ಗದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ!
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೆ.10 ಮತ್ತು 11ರಂದು ನಗರದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
5. ವಿಶೇಷ ಲೇಖನ: ‘ಡೋರ್ವೇ ಎಫೆಕ್ಟ್’ – ಬಾಗಿಲು ದಾಟುತ್ತಿದ್ದಂತೆ ವಿಷಯ ಮರೆತುಹೋಗುವುದೇಕೆ?
ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಹೋದ ತಕ್ಷಣ ಮಾಡಬೇಕಿದ್ದ ಕೆಲಸ ಮರೆತುಹೋಗುವ ವಿದ್ಯಮಾನಕ್ಕೆ ಮನೋವಿಜ್ಞಾನದಲ್ಲಿ ‘ಡೋರ್ವೇ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಮಾನವನ ಮೆದುಳು ಮತ್ತು ನೆನಪಿನ ಶಕ್ತಿಯ ಕಾರ್ಯಾಚರಣೆಯ ಕುರಿತ ಕುತೂಹಲಕಾರಿ ವೈಜ್ಞಾನಿಕ ವಿಶ್ಲೇಷಣೆ ಇಂದಿನ ಪೇಪರ್ನಲ್ಲಿದೆ.
ಈ ಮೆಲಿನ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರಗಳು (ಇ ಲಿಂಕ್ನಲ್ಲಿದೆ)
