ಮಲೆನಾಡುಟುಡೆ ಸುದ್ದಿ/ ಶಿವಮೊಗ್ಗ: ಮಲೆನಾಡಿನ ಅನೇಕ ಭಾಗಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಈ ಬಾರಿ ಯಾವ ಮಳೆಯೂ ಸಹ ನಿರೀಕ್ಷಿಸಿದ ಪ್ರಮಾಣದಲ್ಲಿ ಸುರಿಯದ ಪರಿಣಾಮ ಗಾಜನೂರಿನ ತುಂಗಾ ಜಲಾಶಯದ ನೀರಿನ ಒಳಹರಿವು ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.
ಈ ಹಿನ್ನೆಲೆ ಇಂದು ಅಂದರೆ ಸೆಪ್ಟಂಬರ್ 9 ರಂದು ಗಾಜನೂರಿನ ತುಂಗಾಶಯದ ಒಳಹರಿವು 3,491 ಕ್ಯೂಸೆಕ್ಸ್ ದಾಖಲಾಗಿದ್ದು, ಅದೇ ಪ್ರಮಾಣದ 3,491 ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಇದರಲ್ಲಿ ನದಿಗೆ 2,375 ಕ್ಯೂಸೆಕ್ಸ್, ಯು.ಟಿ.ಪಿ ಕಾಲುವೆಗೆ 600, ಎಡದಂಡೆ ಕಾಲುವೆಗೆ 331, ಬಲದಂಡೆ ಕಾಲುವೆಗೆ 130 ಹಾಗೂ ಕುಡಿಯುವ ನೀರಿಗಾಗಿ 35 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಪ್ರಸ್ತುತ ಜಲಾಶಯದಲ್ಲಿ 3.24 ಟಿ.ಎಂ.ಸಿ (TMC) ಒಟ್ಟು ನೀರು ಸಂಗ್ರಹವಾಗಿದ್ದು, ಅದರಲ್ಲಿ 2.411 ಟಿ.ಎಂ.ಸಿ ನೀರು ಲಭ್ಯವಿದೆ.
ಕಳೆದ ವರ್ಷ ಇದೇ ದಿನಾಂಕದಂದು ಜಲಾಶಯದ ಮಟ್ಟ 588.17 ಮೀಟರ್ ಇತ್ತು ಹಾಗೂ ಒಟ್ಟು ಸಂಗ್ರಹ 3.194 ಟಿ.ಎಂ.ಸಿ ಇತ್ತು. ಕಳೆದ ವರ್ಷ 9,716 ಕ್ಯೂಸೆಕ್ಸ್ ಒಳಹರಿವು ಹಾಗೂ 8,237 ಕ್ಯೂಸೆಕ್ಸ್ ಹೊರಹರಿವು ದಾಖಲಾಗಿತ್ತು.
