₹10,000 ಟಿಕೆಟ್ ಕೊಟ್ಟು ಈ ಮದುವೆಗೆ ಹೋಗುತ್ತಿದ್ದಾರೆ ಯುವಕರು! ಇದೇ ಹಣ ಮಾಡುವ ಹೊಸ ಹಾದಿ!

ಹಂಚಿಕೊಳ್ಳಿ
WhatsApp Facebook X Telegram
Fake Wedding Parties Trend Among Hyderabad Youngsters Without Actual Marriage @ Ai image
Fake Wedding Parties Trend Among Hyderabad Youngsters Without Actual Marriage @ Ai image

ಮಲೆನಾಡು ಟುಡೆ ಸುದ್ದಿ / ಇಲ್ಲಿ ವಧು ಇಲ್ಲ, ವರನೂ ಇಲ್ಲ. ನಿಜವಾದ ಮದುವೆಯಂತೂ ನಡೆಯುವುದೇ ಇಲ್ಲ. ಆದರೂ ಮದುವೆಯ ಮೆರವಣಿಗೆ ನಡೆಯುತ್ತದೆ, ಸಂಗೀತ ಕಚೇರಿ ನಡೆಯುತ್ತೆ, ಅರಶಿನ, ಚಪ್ಪರದಿಂದ ಹಿಡಿದು ಪ್ರತಿಯೊಂದು ನಡೆಯುತ್ತದೆ. ಆಡಂಬರದ ಡ್ರೆಸ್​ಗಳನ್ನ ಹಾಕಿಕೊಂಡು ಅತಿಥಿಗಳು ಸಹ ಬರುತ್ತಾರೆ. ಮುಹೂರ್ತ ಮೀರದಂತೆ ಮದುವೆ ಶಾಸ್ತ್ರಗಳು ನಡೆಯುತ್ತದೆ. ವಧು-ವರರ ಪಾತ್ರದಾರಿಗಳು ಪರಸ್ಪರ ಮಾಲೆ ಬದಲಾಯಿಸಿ ಮದುವೆಯು ಆಗುತ್ತಾರೆ. ಇಷ್ಟೆಲ್ಲದರ ನಡುವೆಯು ಇದೊಂದು ಫೇಕ್​ ವೆಡ್ಡಿಂಗ್​ ..

ಹೌದು, ಇಂಡಿಯಾದಲ್ಲಿ ಏನಲ್ಲಾ ನಡೆಯುತ್ತೆ ಎನ್ನುವುದುಕ್ಕೆ ಇದು ಸಹ ಒಂದು ಉದಾಹರಣೆಯಷ್ಟೆ. ಈ ರೀತಿಯ ಫೇಕ್​ ವೆಡ್ಡಿಂಗ್​ 2023ರಿಂದ ಕಾಣಿಸಿಕೊಳ್ಳಲು ಆರಂಭವಾಗಿದೆ. ಇಂತಹದ್ದೆ ಕಡೆಯಲ್ಲಿ ಆರಂಭವಾಯ್ತು ಎನ್ನುವುದಕ್ಕೆ ಆಧಾರವಿಲ್ಲವಾದರೂ ಹೈದ್ರಾಬಾದ್​ನಲ್ಲಿ ಆರಂಭವಾಯ್ತು ಅನ್ನುತ್ತಾರೆ ಕೆಲವರು. ಸದ್ಯ ಈ ಫೇಕ್ ವೆಡ್ಡಿಂಗ್ ಪಾರ್ಟಿಗಳು ಈಗ ಯುವಜನರನ್ನೆ ಸೆಳೆಯುತ್ತಿದೆ. ತಮಗೆ ಎಂಜಾಯ್ ಹಾಗು ಎಂಟಟೇನ್​ ಮೆಂಟ್ ಬೇಕು ಎನ್ನುವವರಿಗಾಗಿ ಇಂತಹ ಫೇಕ್​ ವೆಡ್ಡಿಂಗ್ ಸರ್ಮನಿಗಳನ್ನ ಆಯೋಜಿಸಲಾಗುತ್ತಿದೆ.

ಸಾಮಾನ್ಯ ಮದುವೆಯಲ್ಲಿ ಕುಟುಂಬವೊಂದು ಕೈಗೊಳ್ಳುವ ಪದ್ದತಿಯಿಂದ ಹಿಡಿದು ಕುಣಿದು ಕುಪ್ಪಳಿಸುವ ಸಡಗರದವರೆಗೂ ಎಲ್ಲವೂ ಇಲ್ಲಿ ನಡೆಯುತ್ತದೆ. ಇದಕ್ಕೆ ಟಿಕೆಟ್ ಪಡೆದು ಯಾರು ಬೇಕಾದರೂ ಬಾಹವಹಿಸುವಬಹುದು. ಈ ಕಾರ್ಯಕ್ರಮಗಳ ಉದ್ದೇಶ ಮದುವೆ ಮನೆಯ ವಾತಾವರಣವನ್ನು ಸೃಷ್ಟಿಸಿ ಬಂದವರಿಗೆ ಮನರಂಜನೆ ನೀಡುವುದು ಎನ್ನುತ್ತಾರೆ ತಜ್ಞ ಜರ್ನಲಿಸ್ಟ್ ಒಬ್ಬರು

ಮದುವೆ ಮನೆಯ ಸಂಭ್ರಮಕ್ಕೆ ಬರುವ ಅತಿಥಿಗಳಿಗಾಗಿ ವಿಶೇಷ ಕೌಂಟರ್​ಗಳನ್ನ ಇಟ್ಟು, ಅವರಿಗೆ ಮೆಹಂದಿ ಹಾಕುವುದರಿಂದ ಹಿಡಿದು, ಫೋಟೋ ಶೂಟ್​ವರೆಗೂ ಪ್ರತಿಯೊಂದು ಸೌಲಭ್ಯ ನೀಡಲಾಗುತ್ತದೆ. ಅಲ್ಲದೆ ಮನರಂಜನೆಯ ಮೇನ್​ ತೀಮ್ ಆಗಿ ವಿವಿಧ ರೀತಿಯ ಆರ್ಕೆಸ್ಟ್ರಾಗಳಿರುತ್ತದೆ. ಬಂದವರು ತಮ್ಮದೆ ಹತ್ತಿರದ ಸಂಬಂಧಿ ಎಂದು ಕುಣಿದು ಕುಪ್ಪಳಿಸಬಹುದು. ವಿಶೇಷ ಅಂದರೆ, ಫೇಕ್​ ವೆಡ್ಡಿಂಗ್​ನಲ್ಲಿಯು ವಧುವಿನ ಕಡೆಯವರು ಮತ್ತು ವರನ ಕಡೆಯವರು ಎಂದು ಡಿವೈಢ್ ಆಗಬಹುದು. ಫೇಕ್​ ವೆಡ್ಡಿಂಗ್​ಗೆ ಬಂದವರಲ್ಲೇ ಯಾರಾದರೂ ಸಹ ಫೇಕ್ ವರ, ವಧು ಸಹ ಆಗಬಹುದು.

ಎಲ್ಲಾ ಪದ್ದತಿಗಳು ನಡೆದರೂ ಮದುವೆಯ ಶಾಸ್ತ್ರಗಳು ಮಾತ್ರ ಇಲ್ಲಿ ನಡೆಯಲ್ಲ, ಫೇಕ್​ ವೆಡ್ಡಿಂಗ್ ಅಲ್ವಾ ಹಾಗಾಗಿ. ಇನ್ನೂ ಊಟ , ತಿಂಡಿ, ಪಾನ ಗೋಷ್ಟಿಗಳು ಸಹ ಜೋರಾಗಿ ನಡೆಯುತ್ತವೆ. ಮದುವೆ ಹಾಗೂ ರಿಸ್ಪೆಪ್ಶನ್​ ಅನ್ನುವ ಸೆಟ್​, ಇಲ್ಲಿ ಕೇವಲ ಅದ್ದೂರಿಯಾಗಿ ಮೈಮೆರತು ಎಂಜಾಯ್​ ಮಾಡುವ ವೇದಿಕೆ! ಏಕೆ ಹೀಗೆ ಅಂದರೆ, ಅದಕ್ಕೆ ಅದರದ್ದೆ ಆದ ರೀಸನ್​ಗಳು ಸಿಗುತ್ತದೆ. ಎಲ್ಲಿಗೆ ಹೋಗಿದ್ದೆ ಎನ್ನುವುದಕ್ಕೆ ಉತ್ತರದಿಂದ ಹಿಡಿದು, ಫೋಟೋ ಸಾಕ್ಷಿ ತೋರಿಸಿ ಹೋಗಿದ್ದು ಮದುವೆ ಎಂದು ಮನೆಯಲ್ಲಿ ನಂಬಿಸುವುದಕ್ಕೂ ಈಥರದ ಇವೆಂಟ್​ಗಳು ರೀಸನ್ ಆಗುತ್ತಿದೆ.

ಸದ್ಯ ಆಂಧ್ರದಲ್ಲಿ ಇದೊಂಥರ ಜೋರು ಬ್ಯುಸಿನೆಸ್ ಆಗಿದೆ ಎಂಬುದು ಸದ್ಯದ ವರ್ತಮಾನ! ಒಬ್ಬರಿಗೆ ಕನಿಷ್ಟ 10 ಸಾವಿರವರೆಗೂ ಟಿಕೆಟ್ ಬುಕ್​ ಮಾಡಿ , ಇಂತಹ ಇವೆಂಟ್​ಗಳನ್ನ ಆಯೋಜಿಸುವವರು, ಇವೆಂಟ್ ಒಂದಕ್ಕೆ ನಾಲ್ಕೈದು ಲಕ್ಷ ಖರ್ಚು ಮಾಡಿ 20-25 ಲಕ್ಷ ದುಡ್ಡಿಯುತ್ತಿದ್ದಾರೆ ಅಂತಾ ಅಂದಾಜಿಸಲಾಗುತ್ತಿದೆ. ಒಟ್ಟಾರೆ, ವಿಷಯ ಹೀಗಿದೆ…ಈ ಹೊತ್ತಿನಲ್ಲಿ ದುಡ್ಡು ಮಾಡುವ ದಾರಿಗಳು ಬದಲಾಗುತ್ತಲೇ ಇರುತ್ತವೆ ಎನ್ನುವುದಕ್ಕೆ ಈ ಪೇಕ್​ ವೆಡ್ಡಿಂಗ್​ ಕಾನ್ಸೆಪ್ಟ್ ಸಾಕ್ಷಿ ಎನ್ನಕ್ಕಾಗಲ್ಲವಾದರೂ, ಇದು ಸಹ ಮುಂದಿನ ಹಣದ ಹಾದಿ ಎನ್ನಬಹುದು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor