man died in soraba due to electrocution /ರಾತ್ರಿ ಮನೆಗೆ ಬರುವಾಗ ನಡೀತು ದುರಂತ! 10 ದಿನದ ಹಿಂದಷ್ಟೆ ಮದುವೆಯಾಗಿದ್ದ ವ್ಯಕ್ತಿ ಸಾವು

Malenadu Today

man died in soraba due to electrocution

ಶಿವಮೊಗ್ಗ: ಹೊಸದಾಗಿ ಮದುವೆಯಾಗಿದ್ದ ಯುವಕನೊಬ್ಬ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವಾಸಿ ದೇವರಾಜು  ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದೇವರಾಜು ಅವರು ತಿಳಿಯದೇ ದಾರಿಯಲ್ಲಿ ತುಂಡಾಗಿಬಿದ್ದಿದ್ದ ವಿದ್ಯುತ್ ಲೈನ್ ಮೆಟ್ಟಿದ್ದರು. ಇದರಿಂದ ಅವರು ಕರೆಂಟ್ ಶಾಕ್​ಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ವಿವಾಹ ಕೇವಲ ಹತ್ತು ದಿನವಾಗಿತ್ತು. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share This Article