man died in soraba due to electrocution
ಶಿವಮೊಗ್ಗ: ಹೊಸದಾಗಿ ಮದುವೆಯಾಗಿದ್ದ ಯುವಕನೊಬ್ಬ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ವಾಸಿ ದೇವರಾಜು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದೇವರಾಜು ಅವರು ತಿಳಿಯದೇ ದಾರಿಯಲ್ಲಿ ತುಂಡಾಗಿಬಿದ್ದಿದ್ದ ವಿದ್ಯುತ್ ಲೈನ್ ಮೆಟ್ಟಿದ್ದರು. ಇದರಿಂದ ಅವರು ಕರೆಂಟ್ ಶಾಕ್ಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ವಿವಾಹ ಕೇವಲ ಹತ್ತು ದಿನವಾಗಿತ್ತು. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.