Nandini brand cakes and muffins ಶಿವಮೊಗ್ಗ: ವಿಶ್ವ ಹಾಲು ದಿನಾಚರಣೆ“ಯ ಅಂಗವಾಗಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ (ಕೆ.ಎಂ.ಎಫ್) ಮತ್ತು ಶಿಮುಲ್ ಇವತ್ತಿನಿಂದ ಅಂದರೆ ಜೂನ್ 1ರಂದು 18 ವಿವಿಧ ರುಚಿಯ ನಂದಿನಿ ಕೇಕ್ ಮತ್ತು ಮಫಿನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹೊಸ ಉತ್ಪನ್ನಗಳು ಗುಣಮಟ್ಟ ಮತ್ತು ಬೆಲೆ ಎರಡರಲ್ಲೂ ಮಾರುಕಟ್ಟೆಯ ಇತರ ಬ್ರಾಂಡ್ಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿವೆ.
ಕೆ.ಎಂ.ಎಫ್ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ 1,325 ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಕ ದಿನಕ್ಕೆ ಸರಾಸರಿ 8 ಲಕ್ಷ ಕಿಲೋಗ್ರಾಂ ಹಾಲು ಸಂಗ್ರಹಿಸುತ್ತಿದೆ. ಸಂಸ್ಥೆಯು 1,836 ಹಾಲು ಡೀಲರ್ಗಳು, 147 ಫ್ರ್ಯಾಂಚೈಸಿ ಪಾರ್ಲರ್ಗಳು ಮತ್ತು 49 ಸ್ವಂತ ಪಾರ್ಲರ್ಗಳ ಮೂಲಕ ದಿನಕ್ಕೆ 2.85 ಲಕ್ಷ ಲೀಟರ್ ಹಾಲು ಮತ್ತು 65 ಸಾವಿರ ಕಿಲೋಗ್ರಾಂ ಮೊಸರು ಮಾರಾಟ ಮಾಡುತ್ತಿದೆ. ಪ್ರಸ್ತುತ ನಂದಿನಿ ಬ್ರಾಂಡ್ ಅಡಿಯಲ್ಲಿ 150ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿವೆ.
ಹೊಸದಾಗಿ ಪರಿಚಯಿಸಲಾದ ಕೇಕ್ ಮತ್ತು ಮಫಿನ್ಗಳ ಬೆಲೆ:Nandini brand cakes and muffins
– ಸ್ಪಾಂಜಿ ವೆನಿಲ್ಲಾ ಕೇಕ್ (25ಗ್ರಾಂ): ರೂ.10

– ಫ್ರೂಟಿ ಸ್ಲೈಸ್ ಕೇಕ್ (30ಗ್ರಾಂ): ರೂ.15
– ವಿವಿಧ ಸ್ಲೈಸ್ ಕೇಕ್ಗಳು (50ಗ್ರಾಂ): ರೂ.15-20
– ವಿವಿಧ ಮಫಿನ್ಗಳು (150ಗ್ರಾಂ): ರೂ.50
– ವಿಶೇಷ ಕೇಕ್ಗಳು (200ಗ್ರಾಂ): ರೂ.110

ಶಿಮುಲ್ ಸಂಸ್ಥೆಯು ಗ್ರಾಹಕರು ಈ ಹೊಸ ಉತ್ಪನ್ನಗಳನ್ನು ಖರೀದಿಸಿ ರೈತರ ಸಹಕಾರಿ ಚಳುವಳಿಗೆ ಬೆಂಬಲ ನೀಡಬೇಕೆಂದು ಕೋರಿದೆ.