thirthahalli : ಪೆಟ್ರೋಲ್ ಖಾಲಿಯಾಯ್ತು ಎಂದು ನಿಲ್ಲಿಸಿದ್ದ ಬೈಕ್ನ್ನು ಕಳ್ಳರು ಕದ್ದಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಬುಧವಾರ ನಡೆದಿದೆ.
thirthahalli : ಏನಿದು ಘಟನೆ
ದಿಲೀಪ್ ಕುಮಾರ್ ಕುಂದಾಪುರ ಹಂಚಿನ ಕಾರ್ಖಾನೆಯಲ್ಲಿ ಕೆಲಸಮಾಡಿಕೊಂಡಿದ್ದರು. ಯಾವುದೋ ಕೆಲಸದ ಸಲುವಾಗಿ ಶಿವಮೊಗ್ಗಕ್ಕೆ ಹೋಗಬೇಕಾಗಿದ್ದರಿಂದ ಹೊಸಂಗಡಿ ಮಾರ್ಗವಾಗಿ ತೀರ್ಥಹಳ್ಳಿಗೆ ಬಂದು ಅಲ್ಲಿಂದ ತಮ್ಮ ಬೈಕ್ನಲ್ಲಿ ಶಿವಮೊಗ್ಗಕ್ಕೆ ಹೋಗುತ್ತಿದ್ದರು. ಆ ವೇಳೆ ಬೆಜ್ಜವಳ್ಳಿಯಲ್ಲಿ ದಿಲೀಪ್ ರವರ ಬೈಕ್ನ ಪೆಟ್ರೋಲ್ ಖಾಲಿಯಾಗಿದೆ. ಆಗ ರಾತ್ರಿ 9:30 ಆಗಿದ್ದರಿಂದ ಬೆಳಿಗ್ಗೆ ಹೋದರೆ ಆಯಿತೆಂದು ದಿಲೀಪ್ ತಮ್ಮ ಬೈಕ್ನ್ನು ಬೆಜ್ಜವಳ್ಳಿ ಸರ್ಕಲ್ನಲ್ಲಿ ನಿಲ್ಲಿಸಿ ಬಸ್ಟ್ಯಾಂಡ್ನಲ್ಲಿ ಮಲಗಿದ್ದಾರೆ. ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಅವರಿಗೆ ಶಾಕ್ ಎದುರಾಗಿದ್ದು, ಅವರ ಬೈಕ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಹಿನ್ನಲೆ ದಿಲೀಪ್ ಮಾಳೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.