shivamogga to bhadravati bus / ಶಿವಮೊಗ್ಗ ಟು ಭದ್ರಾವತಿಗೆ ಹೊಸ ನಗರ ಸಾರಿಗೆ ಬಸ್ ! ಈ ರೂಟ್ ಬೇರೆ

Malenadu Today

shivamogga to bhadravati bus /  ಶಿವಮೊಗ್ಗ ಕೆಎಸ್​ಆರ್​ಟಿಸಿ ಘಟಕ ಶಿವಮೊಗ್ಗ ಹಾಗೂ ಭದ್ರಾವತಿ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮತ್ತೊಂದು ನಗರ ಸಾರಿಗೆ ಸಾರಿಗೆ ಬಸ್ ನ್ನು ರಸ್ತೆಗೆ ಇಳಿಸಿದೆ. ಈ ಸಂಬಂಧ ಪ್ರಕಟಣೆಯನ್ನು ಸಹ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಶಿವಮೊಗ್ಗ ವಿಭಾಗದ ಶಿವಮೊಗ್ಗ ಘಟಕ ಹಾಗೂ ಭದ್ರಾವತಿ ಘಟಕದಿಂದ ಶಿವಮೊಗ್ಗ – ಭದ್ರಾವತಿ ವಯಾ ಸಿದ್ದಾಪುರ, ಮಿಲ್ಟ್ರಿಕ್ಯಾಂಪ್​, ಜಯಶ್ರೀ ಸರ್ಕಲ್ ಮಾರ್ಗವಾಗಿ ನಗರ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಈ ಸಾರಿಗೆಯ ಪ್ರಯೋಜನವನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ನೀಡಿದ್ದಾರೆ.

 

Share This Article