india fight propaganda PIB ಸತ್ಯ ಪರಿಶೀಲನಾ ಘಟಕವು ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನ ಪ್ರಾಯೋಜಿತ ಪ್ರಚಾರದ ವಿರುದ್ಧ ಎಚ್ಚರಿಕೆ ನೀಡಿದೆ ಮತ್ತು ಈ ರೀತಿಯ ಮಾಹಿತಿಯನ್ನು ಜನರು ಪರಿಶೀಲಿಸುವಂತೆ ಒತ್ತಾಯಿಸಿದೆ. ಸಲ್ಲದ ಪ್ರಚಾರದ ಸೋಶಿಯಲ್ ಮೀಡಿಯಾ ಪೋಸ್ಟ್ಗಳನ್ನು ಎಚ್ಚರಿಕೆಯಿಂದ ಗಮನಿಸಿ ಎಂದು ತಿಳಿಸಿದೆ. ಅಲ್ಲದೆ , ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ ಅಥವಾ ನಡೆಯುತ್ತಿರುವ ಘಟನಾವಳಿಗೆ ಸಂಬಂಧಿಸಿದ ಪೋಸ್ಟ್ಗಳ ಬಗ್ಗೆ ಅನುಮಾನ ಬಂದರೆ #PIB-FactCheck ಗೆ ವರದಿ ಮಾಡಿ ಎಂದು ಅದು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ ‘X’ ನಲ್ಲಿ ಹೇಳಿದೆ. ಮಾಹಿತಿ ಮತ್ತು ಪ್ರಸಾರ ಖಾತೆಯ ಅಡಿಯಲ್ಲಿ ಕೆಲಸ ಮಾಡುವ ಪಿಐಬಿ , ಪಾಕಿಸ್ತಾನ-ನಿ ಕ್ಷಿಪಣಿಯು ಭಾರತೀಯ S-400 ಅನ್ನು ಹೊಡೆದಿದೆ ಎಂದು ಹೇಳುವ ಹಳೆಯ ಚಿತ್ರವನ್ನು ಪಾಕಿಸ್ತಾನ ಮೂಲದ ಹಲವಾರು ಹ್ಯಾಂಡಲ್ಗಳು ಪ್ರಸಾರ ಮಾಡುತ್ತಿವೆ ಎಂದು ತಿಳಿಸಿದೆ.
india fight propaganda ಪಾಕ್ ಪರವಾಗಿ ಸುಳ್ಳು ಪೋಸ್ಟ್!
ಸದ್ಯ ಹಂಚಲಾಗುತ್ತಿರುವ ಈ ಚಿತ್ರವು 2023 ರ ಮಾಸ್-ಹಸುವಿನ ಮಿಲಿಟರಿ ಸೈಟ್ನಲ್ಲಿ ಬೆಂಕಿಯ ಚಿತ್ರವಾಗಿದೆ ಎಂದು ತಿಳಿಸಿದೆ. ಅಲ್ಲದೆ ವಿಶೇಷವಾಗಿ ಭಾರತೀಯ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದಂತೆ ಸಂಶಯಾಸ್ಪದ ವಿಷಯವನ್ನು ವರದಿ ಮಾಡದಂತೆ ಸೋಶಿಯಲ್ ಮಿಡಿಯಾ ಬಳಕೆದಾರರನ್ನು ಕೇಳಿಕೊಂಡಿದೆ. ಪಾಕ್ ಪ್ರೋ ವಿಚಾರಗಳನ್ನು ವರದಿ ಮಾಡುವುದನ್ನು ವರದಿ ಮಾಡುವಂತೆ ಕೇಳಿದೆ. ಪಾಕ್ ಸೇನೆಯು ಜಮ್ಮು ಮತ್ತು ಕಾಶ್ಮೀರದ ಸೇನಾ ಪೋಸ್ಟ್ಗಳನ್ನು ಹೊಡೆದು 12 ಭಾರತೀಯ ಸೈನಿಕರನ್ನು ಕೊಂದಿದೆ ಎಂದು ಪಾಕಿಸ್ತಾನ ಮೂಲದ ಹ್ಯಾಂಡಲ್ಗಳ ಮೂಲಕ ಹಂಚಿಕೊಳ್ಳಲಾದ ವೀಡಿಯೊ ಕೂಡ ನಕಲಿ ಎಂದು ಕಂಡುಬಂದಿದೆ. ಚಿತ್ರವು ಆಗಸ್ಟ್ 2011 ರಲ್ಲಿ ಬಳಸಲ್ಪಟ್ಟಿದೆ ಮತ್ತು ಇದು 2016 ರಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಪಿಐಬಿ ಘಟಕ ತಿಳಿಸಿದೆ. ಪಾಕಿಸ್ತಾನದ ಗುಜ್ರಾನ್ವಾ ಲಾದಲ್ಲಿ ಬಿದ್ದ UAV ಅನ್ನು ಪಾಕಿಸ್ತಾನ ಸೇನೆಯು ತಡೆಹಿಡಿದಿದೆ ಎಂದು ಹೇಳುವ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡಲ್ಗಳು ಹಳೆಯ ಚಿತ್ರವನ್ನು ಹಂಚಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ.
india fight propaganda ಅಜಿತ್ ದೋವಲ್ ಹೆಸರಿನ ಪೊಸ್ಟ್ ಕೂಡ ಸುಳ್ಳು
ಪ್ರಸರವಾಗುತ್ತಿರುವ ಈ ಚಿತ್ರವು 2022 ರಲ್ಲಿ ಉಕ್ರೇನ್-ರಷ್ಯಾ ಸಂಘರ್ಷದಿಂದ ಬಂದಿದೆ ಪಿಐಬಿ ಸ್ಪಷ್ಟ ಪಡಿಸಿದೆ. ಜೊತೆಯಲ್ಲಿ ಅಜಿತ್ ದೋವಲ್ ಹೆಸರಿನ ಸೋಶಿಯಲ್ ಮೀಡಿಯಾ ಅಕೌಂಟ್ ಬಗ್ಗೆ ಪ್ರಸ್ತಾಪಿಸಿರುವ ಪಿಐಬಿಯು, ಅಜಿತ್ ದೋವಲ್ರವರು ಯಾವುದೇ ಸೋಶಿಯಲ್ ಮೀಡಿಯಾ ಅಕೌಂಟ್ ಹೊಂದಿಲ್ಲ, ಇಂತಹ ಪೋಸ್ಟ್ಗಳನ್ನು ನಂಬದಿರಿ ಎಂದಿದೆ.