Manjunath rao last rites | ಮಂಜುನಾಥ್​ ರಾವ್​ ಅಮರ್​ ರಹೇ | ಅಂತಿಮ ಯಾತ್ರೆಯಲ್ಲಿ ಏನೆಲ್ಲಾ ಆಯ್ತು

Malenadu Today

Manjunath rao last rites : ಕಾಶ್ಮೀರದ ಪಾಲ್ಗಾಮ್​ ಟೆರರ್ ಅಟ್ಯಾಕ್​ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಉದ್ಯಮಿ ಮಂಜುನಾಥ್​ ರಾವ್​ ರ ಅಂತಿಮ ದರ್ಶನಕ್ಕೆ ಇವತ್ತು ಜನಸಾಗರವೇ ನೆರೆದಿತ್ತು. ಬೆಂಗಳೂರಿನಿಂದ ಅವರ ಪಾರ್ಥಿವ ಶರೀರ, ಸ್ವಗೃಹಕ್ಕೆ ಆಗಮಿಸುತ್ತಲೇ ನೆರದಿದ್ದ ಜನರು ಘೋಷಣೆಗಳನ್ನು ಕೂಗಿದರು 

Manjunath rao last rites : ಭಾರತ್ ಮಾತಾ ಕೀ ಜೈ 

ಅದಾಗಲೇ ಮಂಜುನಾಥ್​ ರಾವ್​ರ ಅಂತಿಮ ದರ್ಶನಕ್ಕೆ ನೇತಾಜಿ ಸರ್ಕಲ್​ ಬಳಿಯಲ್ಲಿಯೇ ನೂರಾರು ಮಂದಿ ಕಾದಿದ್ದರು. ವಿವಿಧ ಧರ್ಮದ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಮೃತರ ಪಾರ್ಥಿವ ಶರೀರ ಆಗಮಿಸುತ್ತಲೇ ಹೂವಿನ ಹಾರಗಳನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು. 

- Advertisement -

ಮಂಜುನಾಥ್​ ಅಮರ್ ರಹೆ

ಇನ್ನೂ ಮನೆಯ ಹೊರಗಡೆ ನೆರದಿದ್ದ ಮಂದಿ ಭಾರತ್​ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೆ ಎಂದು ಘೋಷಣೆ ಕೂಗಿದರು. ಅಲ್ಲದೆ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಸಾವಿನ ಮನೆಯಲ್ಲಿ ದುಃಖತಪ್ತರಾಗಿದ್ದ ಕುಟುಂಬಸ್ಥರನ್ನು, ಕುಟುಂಬದ ಸಂಬಂಧಿಕರು ಸಂತೈಸುತ್ತಿದ್ದ ದೃಶ್ಯ ಅಲ್ಲಿದ್ದವರನ್ನು ಕಣ್ತುಂಬಿ ಬರುವಂತೆ ಮಾಡಿತ್ತು. 

ಶಾಸಕ ಎಸ್​ಎನ್​ ಚನ್ನಬಸಪ್ಪ

ಶಾಸಕ ಎಸ್​ಎನ್​ ಚನ್ನಬಸಪ್ಪ ವಿಷಯ ತಿಳಿದಾಗಿನಿಂದಲೂ ಮೃತರ ಕುಟುಂಬಸ್ಥರ ಸಂಪರ್ಕದಲ್ಲಿದ್ದು, ಆಗಬೇಕಿದ್ದ ಪ್ರತಿ ಕೆಲಸವನ್ನು ಗಮನಿಸಿದರು. ನಿನ್ನೆಯಿಂದಲೂ ಅಲ್ಲಿಯೇ ಮೊಕ್ಕಾಂ ಹೂಡಿರುವ ಅವರು ಇವತ್ತು ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಪ್ರತಿ ಪ್ರಕ್ರಿಯೆಗಳ ಬಗ್ಗೆ ಗಮನ ಹರಿಸಿದರು. 

Manjunath rao last rites : ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ

ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮೃತ ಮಂಜುನಾಥ್​ರವರ ಅಂತಿಮಯಾತ್ರೆಗೆ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ಪಾರ್ಥಿವ ಶರೀರ ಆಗಮಿಸುತ್ತಲೇ ದಾವಣಗೆರೆ ಐಜಿ ರವಿಕಾಂತೇ ಗೌಡ, ಡಿಸಿ ಗುರುದತ್ತ ಹೆಗೆಡೆ, ಎಸ್​ಪಿ ಮಿಥುನ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. 

ಫೋಟೋಗಳಲ್ಲಿ ಮಂಜುನಾಥ್​ ರವರ ಅಂತಿಮಯಾತ್ರೆ ಕ್ಷಣಗಳು

Manjunath rao last rites
ಮೃತ ಮಂಜುನಾಥ್​ರವರ ಮನೆಯ ಮುಂದಿನ ದೃಶ್ಯ
Manjunath rao last rites
ಮೃತರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಸಾರ್ವಜನಿಕರು
Manjunath rao last rites
ಮೃತ ಮಂಜುನಾಥ್​ ರಾವ್​ರವರಿಗೆ ಕುಟುಂಬಸ್ಥರ ನಮನ
Manjunath rao last rites
ಮಂಜುನಾಥ್​ ರಾವ್​ ಮೆರವಣಿಗೆ ವೇಳೆಯಲ್ಲಿ ಕೇಸರಿ ಧ್ವಜ
Manjunath rao last rites
ಮೃತ ಮಂಜುನಾಥ್​ರ ಅಂತಿಮಯಾತ್ರೆ
Manjunath rao last rites
ಮೃತ ಮಂಜುನಾಥ್​ರವರಿಗೆ ಅಂತಿಮ ನಮನ ಸಲ್ಲಿಸಿದ ಕೇಂದ್ರ ಸಚಿವ ಪ್ರಹಾದ್ ಜೋಶಿ
Manjunath rao last rites
ಮೃತ ಮಂಜುನಾಥ್​ರವರ ಪಾರ್ಥಿವ ಶರೀರ ನೋಡುತ್ತಾ ದುಃಖತಪ್ತರಾಗಿ ನಿಂತಿರುವ ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜಯ್​
Manjunath rao last rites
ಮೃತ ಮಂಜುನಾಥ್​ ರವರ ಪತ್ನಿ ಪಲ್ಲವಿಯವರಿಗೆ ಶಾಸಕ ಹಾಗೂ ಸಚಿವರ ಸಾಂತ್ವನ
Manjunath rao last rites
ದಾವಣಗೆರೆ ಐಜಿ ರವಿಕಾಂತೆ ಗೌಡರಿಂದ ಅಂತಿಮನಮನ
Pahalgam Terrorist Attack
ಮೃತ ಮಂಜುನಾಥ್​ರವರಿಗೆ ಅಂತಿಮ ನಮನ ಸಲ್ಲಿಸಿ ಮಾತನಾಡುತ್ತಿರುವ ಸಂಸದ ಬಿವೈ ರಾಘವೇಂದ್ರ
Share This Article