manjunath rao body | ಶಿವಮೊಗಕ್ಕೆ ಮಂಜುನಾಥ್ ರಾವ್ ಪಾರ್ಥಿವ ಶರೀರ? | ಅರ್ಧದಿನ ಬಂದ್, ಕೇಂದ್ರ ಸಚಿವರ ಉಪಸ್ಥಿತಿ!

ಕೊನೆಯ ನವೀಕರಣ: 24 ಏಪ್ರಿಲ್ 2025, 12:07 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ಉದ್ಯಮಿ
manjunath rao body

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ ಮಂಜುನಾಥ್​ ರಾವ್​ರವರ ಅಂತ್ಯಕ್ರಿಯೆ ಇವತ್ತು ನಡೆಯುಲಿದೆ. ಅಂತ್ಯಕ್ರಿಯೆಗು ಮುನ್ನು ಅಂತಿಮ ಮೆರವಣಿಗೆ ನಡೆಯಲಿದ್ದು, ಈ ವೇಳೆ ಸಾವಿರಾರು ಮಂದಿ ಸೇರುವೆ ನಿರೀಕ್ಷೆ ಇದೆ. ಇನ್ನೂ ಉಗ್ರರ ದಾಳಿ ಖಂಡಿಸಿ ಇವತ್ತು ಅರ್ಧದಿನ ಬಂದ್​ ನಡೆಯಲಿದೆ. 

 

ಈ ನಡುವೆ ಬೆಂಗಳೂರಿನಿಂದ ಮಂಜುನಾಥ್​ ರಾವ್​ ರವರ (manjunath rao body) ಪಾರ್ಥಿವ ಶರೀರವನ್ನು ಬೈ ರೋಡ್​ ಮೂಲಕ ಆಂಬುಲೆನ್ಸ್​ನಲ್ಲಿ ತರಲಾಗುತ್ತಿದ್ದು ಚಿತ್ರದುರ್ಗದ ಮೂಲಕ ಶಿವಮೊಗ್ಗಕ್ಕೆ ಆಂಬುಲೆನ್ಸ್ ತಲುಪಲಿದೆ. ಇನ್ನೂ ಮನೆಯ ಬಳಿಯಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

manjunath rao body

ಶಾಸಕ ಎಸ್​ಎನ್​ ಚನ್ನಬಸಪ್ಪರವರು ಮಂಜುನಾಥ್​ ರಾವ್​ರವರ ಅಂತಿಮ ವಿಧಿವಿಧಾನಕ್ಕೆ ಸಂಬಂಧಿಸಿದಂತೆ ತಯಾರಿಯನ್ನು ಗಮನಿಸುತ್ತಿದ್ದು, ಅಂತ್ಯಕ್ರಿಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆಯಿದೆ. ಮೇಲಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗುರುವಾರ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. 

 

ಇನ್ನೂ ಅಂತ್ಯಕ್ರಿಯೆಗೂ ಮೊದಲು ರೋಟರಿ ಚಿತಾಗಾರದವರೆಗೂ ಪಾರ್ಥೀವ ಶರೀರದ ಮೆರವಣಿಗೆ ನಡೆಯಲಿದ್ದು, ಐಬಿ ಸರ್ಕಲ್​, ಕುವೆಂಪು ರಸ್ತೆ, ಜೈಲ್ ಸರ್ಕಲ್​, ಗೋಪಿ ಸರ್ಕಲ್​ , ಬಿಹೆಚ್​ ರೋಡ್​ ಮೂಲಕ ಮೆರವಣಿಗೆ ಸಾಗಲಿದೆ 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor