hosanagara incident | ಮರ ಕಟ್​ ಮಾಡಲು ತರೀಕೆರೆಯಿಂದ ಬಂದವರಿಗೆ ಆಘಾತ | ಜೀವವೇ ಹೋಯ್ತು!

Malenadu Today

 ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ನಿನ್ನೆ ದಿನ ಎರಡು ಬೈಕ್​ಗಳ ನಡುವೆ ಆಕ್ಸಿಡೆಂಟ್ ಆಗಿದೆ. ಈ ಘಟನೆಯಲ್ಲಿ ಓರ್ವರು ಸಾವನ್ನಪ್ಪಿದ್ದಾರೆ. ಅಲ್ಲದೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. 

 

- Advertisement -

ಹೊಸನಗರ ತಾಲ್ಲೂಕು,  (hosanagara incident) ಕೋಡೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ, ನಿನ್ನೆ ಅಂದರೆ ಬುಧವಾರ ಸಂಜೆ ಈ ಘಟನೆ ಸಂಭವಿಸಿದೆ.  

 

ಇಲ್ಲಿನ ಶಾಂತಪುರ ಹೊಳೆ ತಿರುವಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಗ್ರಾಮದ ಕರಕುಚ್ಚಿ ನಿವಾಸಿ, ಕೂಲಿ ಕಾರ್ಮಿಕ ರಾಜು ಸಾವನ್ನಪ್ಪಿದ್ದಾರೆ. 

hosanagara incident

ಇವರು ಭದ್ರಾವತಿ ತಾಲ್ಲೂಕಿನ ಬೊಮ್ಮನಕಟ್ಟೆ ಗ್ರಾಮದ ಶ್ರೀನಿವಾಸ ಎಂಬವರ ಜೊತೆ ಆನೆಗದ್ದೆ ಬಳಿ ಮರ ಕಟಾವ್ ಮಾಡಲು ಬಂದಿದ್ದರು. ಚಿಕ್ಕಜೇನಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

 

ಮತ್ತೊಂದು ಬೈಕಿನಲ್ಲಿದ್ದ ಕೋಡೂರು ಸಮೀಪದ ಸಿದ್ದಗಿರಿ ಗ್ರಾಮದ ನಿವಾಸಿಗಳಾದ ಚರಣ್ ಹಾಗೂ ಪ್ರೀತಮ್ ಅವರಿಗೆ ಗಂಭೀರ ಗಾಯಗಳಾಗಿವೆ. 

 

ಇವರನ್ನು ಮೊದಲು ಶಿವಮೊಗ್ಗ ನಂತರ ಮಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article