67 ನೇ ವಯಸ್ಸಿನಲ್ಲಿ 49 ಪೊಲೀಸ್‌ ಠಾಣೆಗಳಲ್ಲಿ ಕೇಸ್‌ ರೆಕಾರ್ಡ್‌ | ಇಂಗ್ಲೀಷ್‌ ಮಾತನಾಡ್ತಾ ಶಾಕ್‌ ಕೊಟ್ಟ ಕಿಲಾಡಿ ತಾತ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024 ‌ 

ಆರವತ್ತರ ಅಜ್ಜನೊಬ್ಬನ ಕ್ರೈಂ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ನಿವೃತ್ತ ಜೀವನ ನಡೆಸಬೇಕಾಗಿದ್ದ ವ್ಯಕ್ತಿ ವಿಲಾಸಿ ಹೋಟೆಲ್‌ಗಳಲ್ಲಿ ಸ್ಟೇ ಮಾಡಿ, ಅಲ್ಲಿ ಬಿಲ್‌ ಕೊಡದೇ ಎಸ್ಕೇಪ್‌ ಆಗುತ್ತಿದ್ದ. ಹಲವು ಕಡೆ ವಂಚನೆ ಮಾಡಿದ ಈತನನ್ನ ಇದೀಗ ಕರಾವಳಿ ಪೊಲೀಸರು ಹಿಡಿದು ವಿಚಾರಣೆ ನಡೆಸ್ತಿದ್ದಾರೆ. ವಿಶೇಷ ಅಂದರೆ ಈತನ ವಿರುದ್ದ ಬರೋಬ್ಬರಿ 49 ಪೊಲೀಸ್‌ ಠಾಣೆಗಳಲ್ಲಿ ಕೇಸ್‌ ಇದೆಯಂತೆ. ಮೇಲಾಗಿ ಈತನದ್ದು ಇದೇ ಉದ್ಯೋಗವಂತೆ . 

ಹೌದು ದೇಶದ ವಿವಿಧ ಪಂಚತಾರಾ ಹೋಟೆಲ್ ಗಳಲ್ಲಿ ಸ್ಟೇ ಮಾಡಿ, ಅಲ್ಲಿ ಲಕ್ಷಗಟ್ಟಲೇ ಬಿಲ್‌ ಮಾಡಿ ಎಸ್ಕೇಪ್‌ ಆಗುತ್ತಿದ್ದ  ತಮಿಳುನಾಡಿನ ತೂತುಕುಡಿ ನಿವಾಸಿ ಬಿಮೆಂಟ್ ಜಾನ್ (67) ಎಂಬಾತನನ್ನ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.  ಕೈ ಚೀಲ ಒಂದನ್ನ ಹಿಡಿದುಕೊಂಡು ಹೋಟೆಲ್‌ಗಳಿಗೆ ಬರುತ್ತಿದ್ದ ಈತ ಇಂಗ್ಲೀಷ್‌ನಲ್ಲಿ ಮಾತನಾಡಿ ರೂಮ್‌ ಪಡೆಯುತ್ತಿದ್ದನಂತೆ. ಆನಂತರ ಅಲ್ಲಿಯೇ ನಾಲ್ಕೈದು ದಿನ ಸ್ಟೇ ಮಾಡಿ ಬಿಲ್‌ ಮಾಡುತ್ತಿದ್ದನಂತೆ. ಆನಂತರ ಅಲ್ಲಿಂದ ಯಾರಿಗೂ ಗೊತ್ತಾಗದ ಹಾಗೆ ಎಸ್ಕೇಪ್‌ ಆಗುತ್ತಿದ್ದನಂತೆ. 

ಇದೇ ರೀತಿಯಲ್ಲಿ  ಮಹಾರಾಷ್ಟ್ರದ ಥಾಣೆ, ಕೇರಳದ ಕೊಲ್ಲಂ ಸೇರಿ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಈತ ವಂಚಿಸಿದ್ಧಾನೆ ಎನ್ನಲಾಗಿದೆ. ಮಣಿಪಾಲದ ಹೋಟೆಲ್‌ ಒಂದರಲ್ಲಿ ರೂಮ್‌ ಮಾಡಿದ್ದ ಈತ ಅಲ್ಲಿಂದಲೂ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನ ಮಣಿಪಾಲದಲ್ಲಿಯೇ ಸೆರೆ ಹಿಡಿದಿದ್ದಾರೆ. ಆ ಬಳಿಕ ವಿಚಾರಣೆ ವೇಳೆ ವೃದ್ಧನ ವಿರುದ್ಧ ದೇಶದೆಲ್ಲೆಡೆ 49 ಕೇಸ್‌ ಇರುವುದು ಗೊತ್ತಾಗಿದೆ. 

SUMMARY | Man arrested for cheating by staying in hotels

KEY WORDS |  Man arrested for cheating by staying in hotels

Share This Article