ಶಾಲೆ ಕಾರ್ಯಕ್ರಮದ ವೇಳೆ ಗಲಾಟೆ | ಏಳು ಮಂದಿ ವಿರುದ್ಧ ಸುಮುಟೋ ಕೇಸ್ | ಸಾಲಕೊಟ್ಟ ಭದ್ರಾವತಿ ವ್ಯಕ್ತಿ ವಿರುದ್ಧ ಪ್ರಕರಣ
Thirthahalli Police Station limits
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 12, 2024
ಸಾಲ ಮರುಪಾವತಿಗೆ ಮೂರು ತಿಂಗಳು ಕಾಲಾವಾಕಾಶ ಕೇಳಿದ್ದಕ್ಕೆ ಬೆದರಿಕೆ ಒಡ್ಡಿ ಬೈದು ಎಳೆದಾಡಿದ ಆರೋಪದ ಸಂಬಂಧ ಮಹಿಳೆಯೊಬ್ಬರು ಭದ್ರಾವತಿಯ ನಿವಾಸಿ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತೀರ್ಥಹಳ್ಳಿಯ ನಿವಾಸಿಯೊಬ್ಬರು ಭದ್ರಾವತಿಯ ನಿವಾಸಿಯೊಬ್ಬರ ಬಳಿ ಸಾಲ ಪಡೆದಿದ್ದರು ಎನ್ನಲಾಗಿದ್ದು, ಈ ಹಣದ ಮರುಪಾವತಿಗೆ ಮೂರು ತಿಂಗಳ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ, ಸಾಲ ಕೊಟ್ಟ ವ್ಯಕ್ತಿಯು ಬೈದು ನಿಂದಿಸಿ ಎಳೆದಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಏಳು ಮಂದಿ ವಿರುದ್ದ ಸುಮುಟೋ ಕೇಸ್
ಶಾಲೆಯ ಕಾರ್ಯಕ್ರಮವೊಂದರ ನಡುವೆ ಗಲಾಟೆ ಮಾಡುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಹೊಡೆದಾಡಿ ಬೈದಾಡಿಕೊಂಡವರ ವಿರುದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-189(2),189(3), 190, 191(2),194(2)) ಅಡಿಯಲ್ಲಿ ಸುಮುಟೋ ಕೇಸ್ ದಾಖಲಾಗಿದೆ. ಕಳೆದ ಒಂಬತ್ತನೇ ತಾರೀಖು, ಇಲ್ಲಿನ ಶಾಲೆಯೊಂದರ ಕಾರ್ಯಕ್ರಮದ ವೇಳೆ ನಡೆದ ಘಟನೆ ಕುರಿತಾಗಿ, ಕ್ರೈಂ ವಿಭಾಗದ ಪೊಲೀಸ್ ಸಿಬ್ಬಂದಿ ನೀಡಿದ ದೂರಿನನ್ವಯ ತೀರ್ಥಹಳ್ಳಿ ಸುತ್ತಮುತ್ತಲಿನ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ
SUMMARY | Details of incidents that took place under Thirthahalli Police Station limits
KEY WORDS | Thirthahalli Police Station limits