SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಶಿವಮೊಗ್ಗಕ್ಕೆ ಇವತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಗಮಿಸಲಿದ್ದಾರೆ. ಶಿವಮೊಗ್ಗದ ಕಾಲೇಜೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವರು, ಆ ಬಳಿಕ ಸಾಗರದಲ್ಲಿ ನಡೆಯಲಿರುವ ಅಡಿಕೆ ಬೆಳೆಗಾರರ ಮಹತ್ವದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಲೆನಾಡ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮುಂದಿಡುವ ದೃಷ್ಟಿಯಿಂದ ಈ ಸಮಾವೇಶ ನಡೆಸಲಾಗುತ್ತಿದ್ದು, ಸಮಾವೇಶ ವಿಶೇಷತೆಯನ್ನು ಹೊಂದಿದೆ.
WHO ಅಂಗ ಸಂಸ್ಥೆಯನ್ನು ಅಡಕೆಯನ್ನು ಕ್ಯಾನ್ಸರ್-ಉಂಟುಮಾಡುವ ವಸ್ತು ಎಂದು ವರ್ಗೀಕರಿಸಿರುವುದು ಅಡಿಕೆ ಬೆಳೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಅಡಿಕೆ ಬೆಳೆಗಾರರ ಆತಂಕವನ್ನು ವ್ಯಕ್ತಪಡಿಸುವ ವೇದಿಕೆಯು ಈ ಸಮಾವೇಶದಿಂದ ಸಿಗಲಿದೆ.
ಶಿವಮೊಗ್ಗ ಬೆಳಗ್ಗೆ ಬರಲಿರುವ ಕೇಂದ್ರ ಸಚಿವರು ಶಿವಮೊಗ್ಗದಲ್ಲಿ ನಡೆಯುವ ವಸ್ತು ಪ್ರದರ್ಶನಕ್ಕೂ ಭೇಟಿ ನೀಡಲಿದ್ದಾರೆ. ಆ ಬಳಿಕ ಸಾಗರಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ತೆರಳಲಿದ್ದಾರೆ. 2018ರಲ್ಲಿ ಮಾಜಿ ಕೇಂದ್ರ ಸಚಿವ ಅಮಿತ್ ಶಾ ಅವರು ತೀರ್ಥಹಳ್ಳಿಗೆ ಭೇಟಿ ನೀಡಿ ಬೆಳೆಗಾರರೊಂದಿಗೆ ಸಂವಾದ ನಡೆಸಿದ್ದರು. ಇದೀಗ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಾಗರಕ್ಕೆ ಬರುತ್ತಿದ್ದಾರೆ.
SUMMARY | Amit Shah in 2018, Agriculture Minister Shivraj Singh Chouhan in 2025 coming to Shimoga, areca nut growers’ conference
KEY WORDS | Amit Shah in 2018, Agriculture Minister Shivraj Singh Chouhan in 2025, Agriculture Minister visit Shimoga, areca nut growers conference