ಸಾಗರದಲ್ಲಿ ನಡೆಯಬೇಕಿದ್ದ ಅಡಿಕೆ ಬೆಳಗಾರರ ಸಮಾವೇಶ ಮುಂದಕ್ಕೆ | ಯಾವಾಗ ನಡೆಯಲಿದೆ ಗೊತ್ತಾ ಕಾರ್ಯಕ್ರಮ!?
massive convention of areca nut growers in Sagara on December 6 has been postponed to January 18.
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024
ಇದೆ ಡಿಸೆಂಬರ್ ಆರರಂದು ಸಾಗರದಲ್ಲಿ ಅಡಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಸಮಾವೇಶವನ್ನು ಮುಂದೂಡಲಾಗಿದೆ. ಡಿಸೆಂಬರ್ ಆರರ ಬದಲಾಗಿ ಜನವರಿ18ರಂದು ಸಮಾವೇಶ ನಡೆಯಲಿದೆ.
ಕೇಂದ್ರ ಸಚಿವರ ಉಪಸ್ಥಿತಿಗಾಗಿ ಸಮಾವೇಶದ ದಿನಾಂಕ ಬದಲಾಯಿಸಲಾಗಿದ್ದು, ಜನವರಿ 18ರಂದು ಸಮಾವೇಶ ನಡೆಯಲಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಡಿಸೆಂಬರ್ ಆರನೇ ತಾರೀಖು ಸಮಾವೇಶಕ್ಕೆ ಲಭ್ಯವಿರುವ ಸಾಧ್ಯತೆ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಅವರ ಉಪಸ್ಥಿತಿ ಅನಿವಾರ್ಯ ಇರುವ ಕಾರಣಕ್ಕಾಗಿ ದಿನಾಂಕವನ್ನು ಮರು ಹೊಂದಿಸಿ ನಿಗದಿಪಡಿಸಲಾಗಿದೆ ಎಂದು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಸದಸ್ಯರು ತಿಳಿಸಿದ್ದಾರೆ.
ಕೇಂದ್ರ ಸಚಿವರ ಎದುರು ಅಡಕೆ ಹಾನಿಕರವಲ್ಲ ಎಂದು ಮನದಟ್ಟು ಮಾಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರ ಉಪಸ್ಥಿತಿ ಸಮಾವೇಶದಲ್ಲಿ ಅತ್ಯಗತ್ಯವಾಗಿದೆ. ಡಿಸೆಂಬರ್ ಆರರಂದು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆ ಇದೆ. ಆ ಕಾರಣಕ್ಕಾಗಿ ಸಚಿವರು ಇಲ್ಲಿನ ಸಮಾವೇಶಕ್ಕೆ ಬರುವುದು ಕಷ್ಟಸಾಧ್ಯವಾಗಿತ್ತು. ಈ ಕಾರಣಕ್ಕೆ ಸಮಾವೇಶದ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಂಘದ ಪ್ರಮುಖ ತಿಳಿಸಿದ್ದಾರೆ.
SUMMARY |massive convention of areca nut growers in Sagara on December 6 has been postponed to January 18.
KEY WORDS | massive convention of areca nut growers in Sagara, postponed to January 18, areca nut growers convention