2 ವರುಷದಲ್ಲಿ ಶಿವಮೊಗ್ಗ AIRPORT ಸಂಪಾದಿಸಿದ್ದೆಷ್ಟು ಗೊತ್ತಾ!? ಇಲ್ಲಿದೆ ದಾಖಲೆಯ ಸಂಖ್ಯೆ!?

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ ‌

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇದೀಗ ಎರಡು ವರುಷ 2023 ರಲ್ಲಿ ಆರಂಭವಾದ ವಿಮಾನ ನಿಲ್ದಾಣದಲ್ಲಿ ಇದೂವರೆಗೂ ಒಟ್ಟು  1,30,587 ಲಕ್ಷ ಜನ ಪ್ರಯಾಣ ಮಾಡಿದ್ದಾರೆ. ಇದು ಕೂಡ ದಾಖಲಾರ್ಹ ಸಂಖ್ಯೆಯಾಗಿದೆ. ಒಟ್ಟು  3,092 ವಿಮಾನಗಳು ಈ ಎರಡು ವರುಷದ ಅವಧಿಯಲ್ಲಿ ಹಾರಾಟ ನಡೆಸಿವೆ. 

ಶಿವಮೊಗ್ಗ ವಿಮಾನ ನಿಲ್ದಾಣ ಆಗಿದ್ದೆ ಒಂದು ರೋಚಕ ಕಥೆ. ಬಿಎಸ್‌ವೈ ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಸ್ಯಾಂಕ್ಷನ್‌ ಆಗಿದ್ದ ಏರ್‌ಪೋರ್ಟ್‌ ಕಾಮಗಾರಿ ಅವರು ಇಳಿಯುತ್ತಿದ್ದಂತೆ ಅಲ್ಲಿಯೇ ಕಮರಿ ಹೋಗಿತ್ತು. ಮತ್ತೊಮ್ಮೆ ಅಧಿಕಾರಕ್ಕೆ ಬಂದ ಬೆನ್ನಲ್ಲೆ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿ ಪೂರ್ಣಗೊಂಡಿತು. 2023 ರ ಫೆಬ್ರವರಿಯಲ್ಲಿ ಏರ್‌ಫೋರ್ಟ್‌ ಕಾಮಗಾರಿ ಪೂರ್ಣಗೊಂಡು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಆನಂತರ 2023 ಆಗಸ್ಟ್‌ ನಲ್ಲಿ ಏರ್‌ಫೋರ್ಟ್‌ನಲ್ಲಿ ವಾಣಿಜ್ಯ ವಹಿವಾಟು ಆರಂಬವಾಯ್ತು. ಇದೀಗ ಏರ್‌ಫೋರ್ಟ್‌ನಲ್ಲಿ ನೈಟ್‌ ಲ್ಯಾಂಡಿಂಗ್‌ಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸದ್ಯದಲ್ಲಿಯೇ ವಿಮಾನ ನಿಲ್ದಾಣ ಇನ್ನಷ್ಟು ವಹಿವಾಟು ನಡೆಸಲಿದೆ. 

ಸದ್ಯ ಈ ವಿಮಾನ ನಿಲ್ದಾಣದಲ್ಲಿ ಶಿವಮೊಗ್ಗದಿಂದ ಬೆಂಗಳೂರು, ಹೈದರಾಬಾದ್‌, ಗೋವಾ, ಚೆನ್ನೈ, ತಿರುಪತಿಗೆ ವಿಮಾನಗಳು ಸಂಚಾರ ನಡೆಸ್ತಿದ್ದು, ಮುಂಬೈ ಹಾಗು ದೆಹಲಿ ಸಂಪರ್ಕಕ್ಕೆ ಈಗಾಗಲೇ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ.ಸದ್ಯ ಲಭ್ಯ ಮಾಹಿತಿ ಪ್ರಕಾರ, ಕಳೆದ ಎರಡು ವರ್ಷದಲ್ಲಿ ಒಟ್ಟು 1,30,587 ಮಂದಿ ಪ್ರಯಾಣಿಸಿದ್ದು, 3,092 ವಿಮಾನ ಸಂಚಾರ ನಡೆಸಿದ್ದು, ಅಂದಾಜು ಮೂರು ಕೋಟಿ ವಹಿವಾಟು ನಡೆದಿದೆ ಎನ್ನಲಾಗಿದೆ.

Leave a Comment