10 ದಿನಗಳ ಬಳಿಕ ₹1 ಕಾಲು ಕೋಟಿಗಾಗಿ ನಡೆದ OC ಗ್ಯಾಂಗ್‌ವಾರ್‌ ವಿಡಿಯೋ ವೈರಲ್‌ ! ಏನಿದು ಭದ್ರಾವತಿಯಲ್ಲಿ JP ಬರೆಯುತ್ತಾರೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ ಭದ್ರಾವತಿಯಿಂದ ಇನ್ನೊಂದು ಎಕ್ಸ್‌ಕ್ಲ್ಯೂಸಿವ್‌ ಬಿಗ್‌ ಸುದ್ದಿ ಹೊರಬಿದ್ದಿದೆ. ಮಲೆನಾಡು ಟುಡೆ ಈ ಹಿಂದೆಯು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಓಸಿಯ ಭಯಾನಕ ನೆಟ್‌ವರ್ಕ್‌ ಇದೆ ಎನ್ನುವುದನ್ನು ವರದಿ ಮಾಡಿತ್ತು. ಇದಕ್ಕೀಗ ವಿಡಿಯೋ ಸಾಕ್ಷಿ ಲಭ್ಯವಾಗಿದೆ. ಏನದು ವಿಡಿಯೋ ಅದರ ಹಿಂದಿನ ಫುಲ್‌ ಮಟ್ಕಾ ಕಥೆ ಏನು ಎನ್ನುವುದನ್ನು ಜೆಪಿ ಬರೆಯುತ್ತಾರೆ. 

- Advertisement -

Malenadu Today

ನಾವು ಯಾರಿಗೂ ಕಮ್ಮಿಯಿಲ್ಲ, ಹೀಗೊಂದು ಡೈಲಾಗ್‌ ಅಂಡರ್‌ ವರ್ಲ್ಡ್‌ನಲ್ಲಿ ಭದ್ರಾವತಿ ಹೇಳುತ್ತಿದೆ. ವಿಚಾರ ಕಾನೂನು ಬಾಹಿರ ಆದರೂ, ರೂಲ್ಸ್‌ ರೂಲಿಂಗ್‌ ಮಾಡುವ ಭದ್ರಾವತಿಯಲ್ಲಿ ಇದೊಂದು ದೊಡ್ಡ ಸಾಧನೆನೆ ಆಗಿದೆ. ಇಷ್ಟಕ್ಕೂ ಆ ಸಾಧನೆ ಹೇಳುವುದಕ್ಕೂ ಮೊದಲು ವಿಡಿಯೋವೊಂದರ ಪುರಾಣವನ್ನು ಹೇಳುತ್ತೇನೆ.

Malenadu Today

ಉಜ್ಜಿನಿಪುರದಲ್ಲಿ ನಡೆಯಿತು ಮಾರಾಮಾರಿ

ಅನೈತಿಕತೆ ಬೆತ್ತಲಾಗೋದು ಬಾಯಿ ಚಪಲದಿಂದ, ಅದೇ ರೀತಿ ಅಕ್ರಮಗಳು ಬಯಲಾಗುವುದು ಅಪರಾಧಗಳಿಂದ. ಸದ್ಯ ಭದ್ರಾವತಿಯ ಉಜ್ಜಿನಿಪುರದಲ್ಲಿಯು ಇದೇ ಆಗಿರೋದು. ಕಳೆದ ಕೆಲವು ದಿನಗಳ ಹಿಂದೆ ಇಲ್ಲೊಂದು ಪೈಟ್‌ ನಡೆದಿತ್ತು. ಬೈಕ್‌ ನಲ್ಲಿ ಬಂದವರು, ರಸ್ತೆ ಬದಿ ನಿಂತವರನ್ನ ನೋಡಿ ಬೈಕ್‌ ನಿಲ್ಲಿಸಿ, ಏಕಾಯೇಕಿ ಮಾರಕಾಸ್ತ್ರದಿಂದಲೇ ದಾಳಿ ಮಾಡಿದ್ದರು. ಕಾನೂನಾತ್ಮಕ ಭಾಷೆ ಬಳುಸುವದಾದರೆ, ಹರಿತವಾದ ಆಯುಧದಿಂದ ವ್ಯಕ್ತಿಯೊಬ್ಬನಿಗೆ ಹೊಡೆದಿದ್ದರು. ಈ ವೇಳೆ ಕಲ್ಲು, ಕೋಲು ಸೇರಿದಂತೆ ಇತರೇ ಆಯಧಗಳನ್ನ ಹಿಡಿದು ದಾಳಿ ಪ್ರತಿದಾಳಿಯ ಸಮರ ನಡೆದಿತ್ತು. ಸುಮಾರು ಆರು ನಿಮಿಷಗಳ ಕಾಲ ನಡೆದ ಮಾರಾಮಾರಿಯ ದೃಶ್ಯ ಅಪರಾಧದ ಲೋಕದಿಂದಲೇ ಹೊರಕ್ಕೆ ಬಂದಿದೆ. ಹಾಗೆ ನೋಡಿದರೆ, ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯು ಕೆಲಸ ಮಾಡಬೇಕಿತ್ತು. ಅಲ್ಲೆನೋ ಬೇರೆ ನಡೆದಿದೆ ಎನ್ನತ್ತದೆ ಅಪರಾಧ ಲೋಕದ ಮೂಲ. 

Malenadu Today

ನಡೆದಿದ್ದೇನು?

ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿರುವಂತೆ, ಉಜ್ಜಿನಿಪುರದ ಸರ್ಕಲ್‌ ನಲ್ಲಿ ಕಳೆದ ಒಂಬತ್ತನೇ ತಾರೀಖು, ಸಂಜೆ ಐದು ಗಂಟೆ ಸುಮಾರಿಗೆ ಮುಂದೆ ಎರಡು ಬೈಕ್‌ , ಹಿಂದೆ ನಾಲ್ಕು ಬೈಕ್‌ಗಳಲ್ಲಿ ತ್ರಿಬ್ಬಲ್‌ ರೈಡಿಂಗ್‌ ಬರುವ ಗುಂಪು, ನೇರವಾಗಿ ಸರ್ಕಲ್‌ ದಾಟಿ ಅಲ್ಲಿದ್ದ ಪೆಟ್ಟಿಗೆ ಅಂಗಡಿಯ ಬಳಿ ನಿಂತಿದ್ದವರನ್ನ ಟಾರ್ಗೆಟ್‌ ಮಾಡಿತ್ತು. ಬೈಕ್‌ನಲ್ಲಿ ಬಂದ ಯುವಕನೊಬ್ಬ , ಬೈಕ್‌ನಿಂದ ಇಳಿದು ಅಲ್ಲಿ ನಿಂತಿದ್ದವನಿಗೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಹೀಗೆ ಹಲ್ಲೆ ಮಾಡಿದ ಗ್ಯಾಂಗ್‌ ಹಾ….ಬೊ….ಶ ನದ್ದು ಎನ್ನಲಾಗುತ್ತಿದ್ದು, ಆತನ ಗ್ಯಾಂಗ್‌ಗೆ ಟಾರ್ಗೆಟ್‌ ಆಗಿದ್ದು ಆ…ಪ್ರ..ಪ ಎಂಬವನು ಎಂದು ಹೇಳಲಾಗುತ್ತಿದೆ.

Malenadu Today

ಆರು ನಿಮಿಷದ ವಿಡಿಯೋ ಅದರ ಹಿಂದಿನ ಸತ್ಯ

ಸುಮಾರು ಆರು ನಿಮಿಷಗಳ ಕಾಲ ಇರುವ ವಿಡಿಯೋ ದೃಶ್ಯ, ಊರು ಕೇರಿಗಳ ನಡುವೆ ನಡೆಯುವ ಹೊಡೆದಾಟದಂತೆ ಕಾಣುತ್ತದೆ. ಅಲ್ಲದೆ ವಿಡಿಯೋ ಓರ್ವ ತೊಡೆತಟ್ಟಿ ಇನ್ನೊಂದು ಗ್ಯಾಂಗ್‌ನ ಮೇಲೆ ಕಲ್ಲು ಎಸೆಯುತ್ತಾನೆ. ಇತ್ತ ಈ ಗ್ಯಾಂಗ್‌ ಓಬ್ಬಾತ ಬೆನ್ನ ಹಿಂದೆ ಮಾರಕಾಸ್ತ್ರ ಹಿಡಿದು ಎದುರಿನ ಗುಂಪಿನ ಬಳಿ ತೆರಳಿದ ಹೆದರಿಸಲು ಹೋಗಿ ತಲೆಗೆ ಕಲ್ಲಿನಿಂದ ಪೆಟ್ಟು ತಿನ್ನುತ್ತಾನೆ. ಎರಡು ಟೀಂನವರ ಕೈಗಳಲ್ಲು ಮಾರಕಾಸ್ತ್ರ ಇರುವುದು ಕಾಣುತ್ತದೆ. ಕೆಲವರು ಹೊಡೆದಾಟ ತಪ್ಪಿಸಲು ಮುಂದಾಗುತ್ತಾರೆ. ಮತ್ತೆ ಕೆಲವರು ಹೊಡೆದಾಟಕ್ಕೆ ಮುನ್ನುಗುತ್ತಾರೆ. ದೃಶ್ಯಗಳಲ್ಲಿ ಕಾಣುತ್ತಿರುವ ಮಾರಾಮಾರಿ, ಯಾವುದೋ ಘನ ಉದ್ದೇಶಕ್ಕಾಗಿ ನಡೆದಿಲ್ಲ. ಬದಲಾಗಿ ಒಂದು ಕಾಲು ಕೋಟಿ ಓಸಿ ಹಣಕ್ಕಾಗಿ ನಡೆದಿದೆ.

Malenadu Today

ಏನಿದು ಓಸಿ ಕಾರಣ

ಸಟ್ಟಾ ಬಜಾರ್, ಅದೃಷ್ಟದ ನಂಬರ್‌ ಗೆಲ್ಲುವ ಆಟ ಓಪನ್‌ ಕ್ಲೋಸ್‌, ಶಾರ್ಟ್‌ ಫಾರಮ್‌ನಲ್ಲಿ ಓಸಿ ಎನ್ನುತ್ತಾರೆ. ಒಂದೇ ಏಟಿಗೆ ಶ್ರೀಮಂತರಾಗಿ ಆಗುವ ಬಯಕೆಯಲ್ಲಿ ಆಡುವ ಈ ಆಟದಲ್ಲಿ ಬಿಕೆ ಹಾಗು ಬಾಂಬೆ ಮಾರ್ಕೆಟ್‌ಗೆ ಆ ಜಮಾನದಿಂದಲೂ ಇದೆ. ಬಾಂಬೆ ಮಾರ್ಕೆಟ್‌ ನೈಟ್‌ ಆಡುವ ಆಟವಾಗಿದ್ದು, ಇದು ಮುಂಬೈ ಮೂಲದ್ದು, ಬಿಕೆ ಮಾರ್ಕೆಟ್‌ ಮಧ್ಯಾಹ್ನ ಆಡುವ ಆಟವಾಗಿದ್ದು, ಇದರ ಮೂಲ ಹುಬ್ಬಳ್ಳಿ. ಇನ್ನೂ ಈ ಎರಡು ಮಾರ್ಕೆಟ್‌ಗಳ ಬೆನ್ನಲ್ಲೆ ಬಹಳಷ್ಟು ಓಸಿ ಮಾರ್ಕೆಟ್‌ಗಳು ಹುಟ್ಟಿಕೊಂಡಿವೆ. ಮುಂಬೈನಿಂದ ಅಗತ್ಯವಿರುವ ಸಾಪ್ಟ್‌ವೇರ್‌ ತಂದು, ಅದಕ್ಕಾಗಿ ಭೂಗತ ಜಗತ್ತಿನಲ್ಲಿ ಶುಲ್ಕ ಕಟ್ಟಿ, ಕಲ್ಯಾಣಿ, ಶ್ರೀದೇವಿ, ಮುಂಬೈ ಮಾರ್ನಿಂಗ್‌, ಬಾಗ್ಯಲಕ್ಷ್ಮೀ, ರಾಜಯೋಗ, ನಮಸ್ತೆ ಮಾರ್ಕೆಟ್‌ಗಳಂತಹ ಲೋಕಲ್‌ ಮಾರ್ಕೆಟ್‌ ಹುಟ್ಟಿಕೊಂಡಿದ್ದು ಸೂಪರ್‌ ಸಾಲಿಡ್‌ ಆಗಿ ನಡೆಯುತ್ತಿವೆ.

Malenadu Today

ಭದ್ರಾವತಿಯಲ್ಲಿ ಶುರುವಾಗಿದೆ ಬಿ….. ಮಾರ್ಕೆಟ್‌ 

ವಿಶೇಷ ಅಂದರೆ, ಸಟ್ಟಾ ಬಜಾರ್‌ನಲ್ಲಿ ಭದ್ರಾವತಿಯಲ್ಲಿಯೇ ಒಂದು ಲೋಕಲ್‌ ಮಾರ್ಕೆಟ್‌ ಆರಂಭವಾಗಿದ್ದು, ಇದು ಬೆಳಗ್ಗೆ ನಡೆಯುವ ಓಪನ್‌ ಹಾಗೂ ಕ್ಲೋಸ್‌ ಮಾರ್ಕೆಟ್‌ ಆಗಿದೆ. ಇಂತಹದ್ದೊಂದು ಮ್ಯಾಟ್ರು ಭದ್ರಾವತಿಯಲ್ಲಿ ಇದೆ ಅನ್ನುವುದು ಗೊತ್ತಾಗಿದ್ದೆ, ಇವತ್ತು ಹೊರಬಿದ್ದ ಸಿಸಿ ಕ್ಯಾಮರಾದ ಪೂಟೆಜ್‌ನಿಂದ. ಭದ್ರಾವತಿಯಲ್ಲಿ ಪ್ರಭಾವಿಯೊಬ್ಬರು ಈ ಮಾರ್ಕೆಟ್‌ನ್ನು ಖುದ್ದಾಗಿ ನಡೆಸ್ತಿದ್ದಾರೆ. ಅಲ್ಲಿಂದ ಮಾರ್ಕೆಟ್‌ ಸುತ್ತಮುತ್ತಲು ಹರಡಿದ್ದು, ಹಲವೆಡೆ ಪ್ರತಿದಿನ ಬುಕ್ಕಿಂಗ್‌ ಮಾಡಲಾಗುತ್ತಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ ಈ ನಡುವೆ ನಡೆದ ಅಕ್ರಮ, ನಡೆದ ಮಾರಾಮಾರಿ ಹಾಗೂ ಅಪರಾಧ ಬೆಳಕಿಗೆ ಬರುವುದಕ್ಕೂ ಕಾರಣವಾಗಿದೆ. 

Malenadu Today

ಬರಬೇಕಿತ್ತು ಕೋಟಿ, ಬದಲಾಯ್ತು ಪಾನಾ

ಶಿವಮೊಗ್ಗ ಹಾಗೂ ಭದ್ರಾವತಿಯ ಕೆಲವರು ತಮ್ಮ ತಮ್ಮಲ್ಲೇ ಹಣ ಹಾಕಿಕೊಂಡು ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಹಣವನ್ನು  ಇಲ್ಲಿನ ಲೋಕಲ್‌ ಮಾರ್ಕೆಟ್‌ನ ಒಸಿಗೆ ಕಟ್ಟಿದ್ದಾರೆ. ಅವರು ದುಡ್ಡು ಕಟ್ಟಿದ ಫಿಗರ್‌ ಬಂದಿದ್ದರಿಂದ ಬಹುಮಾನ ಮೊತ್ತ ಒಂದು ಕೋಟಿಗೂ ಹೆಚ್ಚು ಹಣವನ್ನು ಬಿಡ್ಡರ್‌ ನೀಡಬೇಕಿತ್ತು. ಆದರೆ, ಇಲ್ಲೊಂದು ಗೋಲ್‌ಮಾಲ್‌ ನಡೆದಿದೆ. 

Malenadu Today

ಮಾರ್ಕೆಟ್‌ನ ಕೊನೆಕ್ಷಣದಲ್ಲಿ ಲೋಕಲ್‌ ಮಾರ್ಕೆಟ್‌ ನಲ್ಲಿ ಪಾನಾ ಬದಲಾಯಿಸಲಾಗಿದೆ. ಅಂದರೆ, ಒಂದು ನಂಬರ್‌ ಬದಲಿಗೆ ಬೇರೆ ಫಿಗರ್‌ ಡ್ರಾ ಮಾಡುವಂತೆ ಮಾಡುವುದು. ಹೀಗೆ ಬದಲಾದ್ದರಿಂದ ಭದ್ರಾವತಿ ಬಿಡ್ಡರ್‌ ಗೆದ್ದ ದುಡ್ಡನ್ನು ಕೊಡುವುದಕ್ಕೆ ನಿರಾಕರಿಸಿದ್ದಾನೆ. ಆಡಿಲ್ವಾ, ಕಟ್ಟಿಲ್ವ, ಕೊಡಬೇಕಲ್ವ ಎಂದು ಭದ್ರಾವತಿಯ ಹಾಗೂ ಶಿವಮೊಗ್ಗದ ಗುಂಪು ಗಲಾಟೆ ಮಾಡಿದೆ. ಹೀಗೆ ಗಲಾಟೆ ನಡೆದಿದ್ದು ಉಜ್ಜಿನಿ ಪುರದಲ್ಲಿ. ಇದಿಷ್ಟು ವಿಷಯ.

Malenadu Today

SUMMARY |  bhadravati oc case fight in ujjanipura

KEY WORDS |   bhadravati oc case fight in ujjanipura

Share This Article