SHIVAMOGGA | MALENADUTODAY NEWS | ಮಲೆನಾಡು ಟುಡೆ Jan 15, 2025
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಸೋಮವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿಚಾರ ನಿನ್ನೆ ಗೊತ್ತಾಗಿದೆ
ನಡೆದಿದ್ದೇನು?
ಸೊರಬ ತಾಲ್ಲೂಕು ನೆಗವಾಡಿ ಗ್ರಾಮದ ಸಮೀಪದ ಹಿರೇಮಾಗಡಿ ಕ್ರಾಸ್‌ನ ಬಳಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೇನ್ ರೋಡ್‌ನಲ್ಲಿ ಬರುತ್ತಿದ್ದ ಜೀಪ್‌ವೊಂದು ಚಾಲಕನ ಕಂಟ್ರೋಲ್ ತಪ್ಪಿ ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಹಾಕುವ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಜೀಪ್‌ನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಚಿಕ್ಕಕಬ್ಬೂರು ಗ್ರಾಮದ ಹನುಮಂತಪ್ಪ (50) ಸ್ಥಳದಲ್ಲೇ ಮೃತಪಟ್ಟರೆ, ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಮತ್ತು ಕಣಸೋಗಿ ಗ್ರಾಮದ ರೇಣುಕಮ್ಮ (65) ಶಿಕಾರಿಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಳಿದಂತೆ ನಾಲ್ವರ ಸ್ಥಿತಿ ಗಂಭೀರವಾಗಿದೆ. ಇವರೆಲ್ಲರು ಕಣಸೋಗಿಯಿಂದ ಎಸ್.ಎನ್.ಕೊಪ್ಪ ಕಡೆಗೆ ಹೋಗುತ್ತಿದ್ದರು. ಘಟನೆ ಸಂಬಂಧ ಆನವಟ್ಟಿ ಠಾಣೆಯಲ್ಲಿ FIR ದಾಖಲಾಗಿದೆ
SUMMARY | Accident near Hiremagadi Cross near Negavadi village in Sorab taluk
KEY WORDS | Accident near Hiremagadi Cross , Negavadi village , Sorab taluk