soraba accident news today/ ಅಜ್ಜಿಯನ್ನ ಕಂಡು ಓಡಿ ಬಂದ 3 ವರ್ಷದ ಬಾಲಕನಿಗೆ ಲಾರಿ ಡಿಕ್ಕಿ! ನಡೆದಿದ್ದೇನು?

Malenadu Today

soraba accident news today /

ಸೊರಬ ತಾಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ನಿನ್ನೆ ದಿನ ಸೋಮವಾರ ಅತಿವೇಗದಲ್ಲಿ ಬಂದ ಲಾರಿಯೊಂದು ಮೂರು ವರ್ಷದ ಮಗುಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.  ಮೃತ ಬಾಲಕ ಮೊಹಮ್ಮದ್ ಆಹಿಲ್ ಖಾನ್ (3) ಶಿರಸಿಯ ಅತಾವುಲ್ಲಾ ಖಾನ್ ಮತ್ತು ಫರೀನಾ ಬೇಗಂ ದಂಪತಿಗಳ ಪುತ್ರ. ಘಟನೆಯ ಸಮಯದಲ್ಲಿ ಮಗು ಅಂಗನವಾಡಿಯಿಂದ ಹೊರಬಂದು ಅಜ್ಜಿಯನ್ನು ನೋಡಲು ರಸ್ತೆ ದಾಟುತ್ತಿತ್ತು.  ಈ ಸಂಬಂಧ  ಮೃತ ಬಾಲಕನ ಅಜ್ಜಿ ನಸೀಮಾ ಬಾನು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಪ್ರಕಾರ, ಲಾರಿ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಈ ದುರಂತಕ್ಕೆ ಕಾರಣ. ಸೊರಬ ಪೊಲೀಸ್ ಠಾಣೆಯಲ್ಲಿ ಈ ಸಂಬಂಧಿ ಪ್ರಕರಣ ದಾಖಲಾಗಿದೆ.  

Share This Article