ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ ತೂಗುದೀಪ ಪರ ಕಪಿಲ್‌ ಸಿಬಲ್‌ ವಾದ!?

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ನಟ ದರ್ಶನ್‌ ತೂಗುದೀಪರವರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಈ ಸಂಬಂಧ ಮಾರ್ಚ್‌ 18 ವಿಚಾರಣೆ ನಡೆಯಲಿದೆ. ಈ ವೇಳೆ ಸುಪ್ರೀಂಕೋರ್ಟ್‌ನ‌ಲ್ಲಿ ನಟ ದರ್ಶನ್‌ ರವರ ಪರವಾಗಿ ಪ್ರ‍ಖ್ಯಾತ ವಕೀಲ ಕಪಿಲ್‌ ಸಿಬಲ್‌ ವಾದ ಮಂಡನೆ ಮಾಡುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಮಾಧ್ಯಮಗಳ ವರದಿಯ ಪ್ರಕಾರ, ಕಪಿಲ್‌ ಸಿಬಲ್‌ರವರನ್ನು ದರ್ಶನ್‌ ರವರ ಪರವಾಗಿ ಕಾನೂನು ಸಲಹೆಗಾರರ ತಂಡ ಭೇಟಿ ಮಾಡಿ ಈ ಕುರಿತಾಗಿ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. 

ಪ್ರಕರಣದ ಪೂರ್ಣ ವಿವರ, ಕೋರ್ಟ್‌ನಲ್ಲಿ ಜಾಮೀನಿಗಾಗಿ ನಡೆದ ವಾದ , ಪ್ರತಿವಾದ ಹಾಗೂ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವಿವರಗಳನ್ನು ಒಳಗೊಂಡಂತೆ ಕೇಸ್‌ಗೆ ಸಂಬಂಧಿಸಿದ ಪೂರಕ ದಾಖಲೆಯೊಡನೆ ಕಪಿಲ್‌ ಸಿಬಲ್‌ರನ್ನ ನಟ ದರ್ಶನ್‌ರವರ ತಂಡ ಸಂಪರ್ಕಿಸಿದ್ದು ಚರ್ಚೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ. 

ಇನ್ನೂ ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಸಂಬಂಧ 1492 ಪುಟಗಳ ಫೈಲ್‌ನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ರಾಜ್ಯಸರ್ಕಾರ ಎ ಒನ್‌ ಪವಿತ್ರಾಗೌಡ , ಎ ಟು ದರ್ಶನ್‌ ಸೇರಿದಂತೆ ಒಟ್ಟು ಏಳು ಮಂದಿಗೆ ಜಾಮೀನು ನೀಡಿರುವುದನ್ನ ಆಕ್ಷೇಪಿಸಿದೆ. ಜಾಮೀನು ರದ್ದಿಗೆ ಅರ್ಜಿ ಸಲ್ಲಿಸಿದೆ. 

SUMMARY |  eminent lawyer kapil sibal likely argue for darshan thoogudeepa case in supreme court

KEY WORDS |  eminent lawyer kapil sibal , darshan thoogudeepa case , supreme court

Leave a Comment