SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ಶಿವಮೊಗ್ಗ ನಗರದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾನಿಲಯದ ಕಾಲೇಜಿನ ಆವರಣದಲ್ಲಿ ಸುಗ್ಗಿ ಸಂಭ್ರಮವನ್ನ ಸಡಗರ ಆಚರಿಸಲಾಯ್ತು, ಹಳ್ಳಿಯಲ್ಲಿ ರೈತರು ಸಂಕ್ರಾಂತಿ ಹಬ್ಬದ ದಿನವನ್ನ ಹೇಗೆ ಆಚರಿಸುತ್ತಾರೋ ಅದೇ ರೀತಿಯಲ್ಲಿ ಕಬ್ಬನ್ನು ಜೋಡಿಸಿ, ಬೆಳೆದಂತಹ ಧವಸ-ಧಾನ್ಯಗಳನ್ನ ಇಟ್ಟು ರಾಶಿ ಪೂಜೆ ನೆರವೇರಿಸಿ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.
ವಿದ್ಯಾರ್ಥಿನಿಯರು ಕಾಲೇಜಿಗೆ ಎಂದಿನಂತೆ ಬಂದಿರಲಿಲ್ಲ, ಬದಲಾಗಿ ಬಣ್ಣ-ಬಣ್ಣದ ಮತ್ತು ನಕ್ಕಿಗಳಿಂದ ಶೃಂಗಾರಗೊಂಡ ಸೀರೆಯನ್ನುಟ್ಟು ಅಪ್ಪಟ ಭಾರತೀಯ ನಾರಿಯರಂತೆ ಕಂಗೊಳಿಸುತ್ತಿದ್ರು, ವಿದ್ಯಾರ್ಥಿಗಳು ಕೂಡ ಎಂದಿನಂತೆ ಕಾಲೇಜಿಗೆ ಬಾರದೇ ಪಂಚೆ, ಶರ್ಟ್, ಶಲ್ಯದಲ್ಲಿ ಹಾಜರಾಗುವ ಮೂಲಕ ಮಿಂಚಿದ್ರು.
ಕಾಲೇಜು ಕೂಡ ನವ ವಧುವಿನಂತೆ ಶೃಂಗಾರಗೊಂಡು, ಅಂಗಳದ ತುಂಬ ರಂಗೋಲಿಯಿಂದ ಬಣ್ಣ ಬಣ್ಣದ ಕಲರ್ ಮೂಲಕ ಕಂಗೊಳಿಸುತ್ತಿತ್ತು. ಪ್ರತಿವರ್ಷದಂತೆ ಈ ಬಾರಿಯೂ ಕೂಡ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸುಗ್ಗಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು.
ಇದಕ್ಕೂ ಮುನ್ನ ಕಾಲೇಜು ಪ್ರಶಿಕ್ಷಣಾರ್ಥಿಗಳಿಂದ ತಲೆ ಮೇಲೆ ಪೂರ್ಣ ಕುಂಭ ಹೊತ್ತುಕೊಂಡು ಕಾಲೇಜಿನಿಂದ ನಗರದ ಗೋಪಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಫೋಟೋಗೆ ಫೋಸ್ ನೀಡಿದ ವಿದ್ಯಾರ್ಥಿಗಳು, ಸೆಲ್ಫಿಗೆ ಪೋಸ್ ಕೊಡುತ್ತಾ ನಕ್ಕು ನಲಿದಾಡಿದರು. ಪರಸ್ಪರ ಎಳ್ಳು ಬೆಲ್ಲ ತಿಂದು ಸಂಕ್ರಾಂತಿ ಶುಭಾಶಯ ಕೋರಿದರು. ಇನ್ನು ಹಾಡಿಗೆ ಸಖತ್ ಸ್ಟೇಪ್ ಹಾಕಿ ಯುವಕ ಯುವತಿಯರು ಮಸ್ತ್ ಎಂಜಾಯ್ ಮಾಡಿದರು
SUMMARY | Sankranti celebrations, suggi festivities at Kuvempu Centenary College of Education, Shivamogga City
KEY WORDS | Sankranti celebrations, suggi festivities , Kuvempu Centenary College of Education, Shivamogga City