17 ವರುಷಗಳ ನಂತರ ಮಾಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ | ಏನಿದು ಮಂಡಗದ್ದೆ , ನೆಲ್ಲಿಸರ ಕ್ಯಾಂಪ್‌ ಕೇಸ್

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌  

17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನ ತೀರ್ಥಹಳ್ಳಿ ತಾಲ್ಲೂಕು ಮಾಳೂರು ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿ ಕೋರ್ಟ್‌ ಮುಂದೆ ಹಾಜರು ಪಡಿಸಿದ್ದಾರೆ. ಗೋಪಾಲ ಪೂಜಾರಿ ಬಂಧಿತ ಆರೋಪಿ. ಕಳೆದ ಶುಕ್ರವಾರ ಮಾಳೂರು ಪೊಲೀಸರು ಆರೋಪಿಯನ್ನುಕಾರ್ಕಳ ತಾಲ್ಲೂಕಿನ ಮುದ್ರಾಡಿ ಬಳಿ ಬರುವ ನೆಲ್ಲಿಕಟ್ಟೆ ಬಳಿ ಅರೆಸ್ಟ್‌ ಮಾಡಿದ್ದಾರೆ

2008 ರಲ್ಲಿ ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್‌ ಬಳಿ ಕೊಲೆಯೊಂದು ನಡೆದಿತ್ತು. ಈ ಪ್ರಕರಣದಲ್ಲಿ ಗೋಪಾಲ ಪೂಜಾರಿ ಸೇರಿದಂತೆ ಇನ್ನಿಬ್ಬರು ಆರೋಪಿಗಳಿದ್ದರು. ಈ ಸಂಬಂಧ ಕೋರ್ಟ್‌ ವಿಚಾರಣೆಯಲ್ಲಿ ಇಬ್ಬರು ಆರೋಪಿಗಳು ಖುಲಾಸೆಗೊಂಡಿದ್ದರು. ಆದರೆ ಆರೋಪಿ ಗೋಪಾಲ ಪೂಜಾರಿ ವಿಚಾರಣೆಗೆ ಹಾಜರಾಗದೇ ನಾಪತ್ತೆಯಾಗಿದ್ದರು. ಇದೀಗ ಅವರನ್ನು ಪತ್ತೆ ಮಾಡಿರುವ ಪೊಲೀಸರು ಕೋರ್ಟ್‌ ಮುಂದೆ ಆರೋಪಿಯನ್ನು ಹಾಜರುಪಡಿಸಿದ್ದಾರೆ.

SUMMARY | Accused arrested in 17-year-old murder case, Malur Police Station, Karkala, Nellikatte, Mandagadde, Nellisara Camp, Mudradi, Thirthahalli News

KEY WORDS |‌ Accused arrested in 17-year-old murder case, Malur Police Station, Karkala, Nellikatte, Mandagadde, Nellisara Camp, Mudradi, Thirthahalli News

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor