ಸಿಡ್ನಿಯಲ್ಲಿ ಸಿನಿಮಾ ಸೀನ್‌ | ಕೆಣಕ್ಕಿದ್ದಕ್ಕೆ ಕೆರಳಿದ ಬೂಮ್‌…ಬೂಮ್‌ …ಬೂಮ್ರಾ ..! ಕನ್ನಡ ಕಾಮೆಂಟ್ರಿ ಚಿಂದಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 3, 2025 ‌‌ 

ಸಿಡ್ನಿಯಲ್ಲಿ ನಡೆಯುತ್ತಿರುವ AUS vs IND 5 ನೇ ಟೆಸ್ಟ್‌ನ ಮ್ಯಾಚ್‌ನಲ್ಲಿ ಭಾರತೀಯರ ಆಟ ಕಳಪೆಯಾಗಿದ್ದರೂ ಸಹ, ಬೌಲಿಂಗ್‌ನ ವೇಳೆ ಜಸ್ಪ್ರೀತ್ ಬುಮ್ರಾ ನೀಡಿದ ಸ್ಟ್ರೈಕ್‌ವೊಂದು ಥೇಟು ಸಿನಿಮಾ ಸ್ಟೈಲ್‌ನಲ್ಲಿದೆ. 

ಇವತ್ತಿನ ಆಟದ ಅಂತಿಮ ಔವರ್‌ನಲ್ಲಿ ಸ್ಪ್ರೀತ್ ಬುಮ್ರಾ ಬೌಲಿಂಗ್‌ ಮಾಡಲು ಮುಂದಾದಾಗ, ಅಲ್ಲಿ ಸ್ಯಾಮ್ ಕಾನ್ಸ್ಟಾಸ್‌ ಹಾಗೂ ಬೂಮ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಬೌಲಿಂಗ್ ಮಾಡುವಾಗ ವಿಳಂಬ ತೋರಿದ್ದನ್ನ ಬುಮ್ರಾ ಪ್ರಶ್ನಿಸಿದ್ದಕ್ಕೆ ಸ್ಯಾಮ್‌ ಟೀಕಿಸಲು ಆರಂಭಿಸಿದ್ದಾರೆ. ಈ ವೇಳೆ ಬುಮ್ರಾ ವಾಟ್‌ ವಾಟ್‌ ಎನ್ನುತ್ತಾ ಮುನ್ನುಗಿಬಂದರು. ಆಗ ಅಡ್ಡ ಬಂದ ಅಂಪೈರ್‌ ಇಬ್ಬರನ್ನ ಸಮಾಧಾನ ಮಾಡಿದರು. 



ಇದಕ್ಕೆ ಉತ್ತರ ಎಂಬಂತೆ ಮರು ಬೌಲ್‌ನಲ್ಲೇ ಬುಮ್ರಾ ಖ್ವಾಜಾರವರ ವಿಕೆಟ್‌ ಪಡೆದರು. ಅಲ್ಲದೆ ಕ್ಷಣವೂ ತಡಮಾಡದೆ ವಿಕೆಟ್‌ ಸ್ಯಾಮ್‌ನ ಎದುರು ತಮ್ಮ ಸಂತೋಷ ವ್ಯಕ್ತಪಡಿಸಿದರು. ಸ್ಲೆಡ್ಜಿಂಗ್‌ ಸ್ಟೈಲ್‌ನಲ್ಲಿ ನಡೆದ ಈ ಸೀನ್‌ಗಳಿಗೆ ಕನ್ನಡದ ಕಾಮೆಂಟ್ರಿಯಂತು ಕೆಜಿಎಫ್‌ ರೇಂಜ್‌ನಲ್ಲಿತ್ತು ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸದ್ಯ ಸಖತ್‌ ವೈರಲ್‌ ಆಗುತ್ತಿದೆ. 



SUMMARY | Jasprit Bumrah Gives Death Stare To Sam Konstas After Dismissing Usman Khawaja

KEY WORDS | Jasprit Bumrah, Sam Konstas , Dismissing Usman Khawaja

Share This Article