ಸವಳಂಗ ರಸ್ತೆಯಲ್ಲಿ ಲಾರಿ ಡಿಕ್ಕಿ, ಕಾರು ಪೀಸ್‌ ಪೀಸ್‌ | ATM ನಲ್ಲಿ ಹಣ ಬಿಡಿಸುವಾಗ ಈ ವಿಷಯದಲ್ಲಿ ಜಾಗೃತೆ ವಹಿಸಿ |

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024 ‌‌

ಮಹಿಳೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ATM Card ಬದಲಿಸಿ ಆನಂತರ ಅವರ ಅಕೌಂಟ್ನಿಂದ ಹಣ ಬಿಡಿಸಿಕೊಂಡು ವಂಚಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ. 68 ವರ್ಷದ ಮಹಿಳೆಯೊಬ್ಬರಿಗೆ ಎಟಿಎಂನಲ್ಲಿ ಸಹಾಯ ಮಾಡಲು ಬಂದಿದ್ದ ವ್ಯಕ್ತಿಯೊಬ್ಬರ ಅವರಿಗೆ ಹಣ ಬಿಡಿಸಿಕೊಳ್ಳಲು ನೆರವಾಗಿ, ಎಟಿಎಂ ಕಾರ್ಡ್‌ ಕೊಡುವಾಗ ಬೇರೆ ಕಾರ್ಡ್‌ನ್ನ ನೀಡಿದ್ದ. ಅಲ್ಲದೆ ಮಹಿಳೇ ವಹಿವಾಟು ನಡೆಸುವಾಗ ಆಕೆಯ ಪಾಸ್‌ವರ್ಡ್‌ ನೋಡಿದ್ದ ಆತ ಆ ಬಳಿಕ ಸಂತ್ರಸ್ತೆಯ ಎಟಿಎಂ ಕಾರ್ಡ್‌ ಬಳಸಿ ಹಣ ಬಿಡಿಸಕೊಂಡಿದ್ದ. ತಮ್ಮ ಮೊಬೈಲ್‌ಗೆ ಬಂದ ಮೆಸೇಜ್‌ ನೋಡಿ ಆತಂಕಗೊಂಡಿದ್ದ ಮಹಿಳೆಗೆ ಎಟಿಎಂ ಬದಲಾಗಿರುವುದು ಗೊತ್ತಾಗಿದೆ. 

- Advertisement -

ಕಾರು ಲಾರಿ ನಡುವೆ  ಡಿಕ್ಕಿ

ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಕಾರು ಹಾಗೂ ಲಾರಿಯ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕಾರೊಂದು ಸಂಪೂರ್ಣ ಜಖಂಗೊಂಡಿದೆ. ನಿನ್ನೆ ದಿನ ಈ ಘಟನೆ ನಡೆದಿದೆ. ಸವಳಂಗ ರಸ್ತೆ ಸರ್ಜಿ ಕನ್ವೆಷನಲ್ ಹಾಲ್ ಬಳಿ ಲಾರಿ ಮತ್ತು ಕಾರು ನಡುವೆ ಡಿಕ್ಕಿಯಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಟೋ ವಾಹನವನ್ನ ಸ್ಥಳಕ್ಕೆ ತರಿಸಿಕೊಂಡು ಕಾರನ್ನ ಶಿಫ್ಟ್‌ ಮಾಡಿದ್ದಾರೆ. 

SUMMARY |  shivamogga daily news 

KEY WORDS | shivamogga daily news 

Share This Article
Leave a Comment

Leave a Reply

Your email address will not be published. Required fields are marked *