SHIVAMOGGA | MALENADUTODAY NEWS | ಮಲೆನಾಡು ಟುಡೆ Jan 19, 2025
ಸರ್ಕಾರಿ ಕಾಮಗಾರಿಗೆ ಬಳಕೆಯಾಗಬೇಕಾದ ಮಣ್ಣು ಖಾಸಗಿ ಲೇಔಟ್‌ಗಳಿಗೆ ಪೂರೈಕೆಯಾಗುತ್ತಿದೆ. ಹೀಗೊಂದು ದಟ್ಟ ಅನುಮಾನ ಮೂಡಿದೆ.ಅಲ್ಲದೆ ಈ ಸಂಬಂಧ . ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ, ಬಂದರು ಮತ್ತು ಒಳ ಲಸಾರಿಗೆ ಇಲಾಖೆ, ಉಪವಿಭಾಗ ತೀರ್ಥಹಳ್ಳಿ ಇವರಿಗೆ ದೂರು ಸಹ ಸಲ್ಲಿಕೆಯಾಗಿದೆ.
ದೂರಿನಲ್ಲಿ ಏನಿದೆ?
ತೀರ್ಥಹಳ್ಳಿ ನಿವಾಸಿಯೊಬ್ಬರು ದಾಖಲಿಸಿರುವ ದೂರಿನಡಿಯಲ್ಲಿ ತೀರ್ಥಹಳ್ಳಿ- ಕುಂದಾಪುರ (ಎಸ್‌ಹೆಚ್-52) ರ ತೀರ್ಥಹಳ್ಳಿ- ಶಿವಮೊಗ್ಗ ರಸ್ತೆಯಲ್ಲಿ ಭಾರ್ತಿಪುರ ಭಾನುಗೋಡು ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಬಗ್ಗೆ ವಿವರಿಸಲಾಗಿದೆ. ಈ ರಸ್ತೆ ನಿರ್ಮಾಣಕ್ಕೆ ಅಗೆಯುವ ಮಣ್ಣನ್ನು ಭಾರತೀಪುರ ಗ್ರಾಮದಲ್ಲಿರುವ ನಿರ್ದಿಷ್ಟ ಖಾಸಗಿಯವರ ಕೃಷಿ ಜಮೀನಿನಲ್ಲಿ ಲೇಔಟ್ ಮಾಡಲು ತಂದು ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಸ್ಪಷ್ಟವಾಗಿ ಆರೋಪಿಸಲಾಗಿದೆ.
ಉದ್ದೇಶಿತ ಬೈಪಾಸ್ ರಸ್ತೆಯು ಭಾರತೀಪುರದ ಭಾನುಗೋಡಿನಿಂದ ಪ್ರಾರಂಭವಾಗಿ ತೀರ್ಥಹಳ್ಳಿಯ ಆಗುಂಬೆ ರಸ್ತೆಯ ಬಿಳಲುಕೊಪ್ಪದಲ್ಲಿ ಸೇರುತ್ತದೆ. ಈ ಬೈಪಾಸ್ ರಸ್ತೆ ಉದ್ದಕ್ಕೂ ಕೆಲವು ಕಡೆ ಏರು, ಕೆಲವು ಕಡೆ ತಗ್ಗು ಪ್ರದೇಶಗಳಿದ್ದು, ಏರು ಭಾಗದಲ್ಲಿ ರಸ್ತೆಯಲ್ಲಿ ಅಗೆಯುವ ಮಣ್ಣು ತಗ್ಗು ಇರುವ ಪ್ರದೇಶಕ್ಕೆ ಬಳಸಿಕೊಳ್ಳಲು ಅವಶ್ಯ ಇರುತ್ತದೆ. ಆದರೆ ಸರ್ಕಾರಿ ಕಾಮಗಾರಿಗೆ ಅಗೆಯುವ ಮಣ್ಣನ್ನು ಖಾಸಗಿ ಲೇಔಟ್‌ಗೆ ಬಳಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಪ್ರತಿ ಲಾರಿ ಲೋಡೊಂದಕ್ಕೆ 800-1000 ರೂಪಾಯಿಗಳಿಗೆ ವಸತಿ ಬಡಾವಣೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ಥಳ ವೀಕ್ಷಣೆ ಮಾಡಿ ಕ್ರಮ ಕೈಗೊಳ್ಳುವಂತೆ ಉನ್ನತ ಆಡಳಿತಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಸದ್ಯ ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನವಹಿಸುತ್ತಾರಾ? ನಡೆದ ವಿಚಾರಗಳನ್ನ ಪರಿಶೀಲಿಸಿ ಕ್ರಮವಹಿಸುತ್ತಾರಾ? ಉತ್ತರ ಸಿಗಬೇಕಿದೆ. ಮೇಲಾಗಿ ಈ ನಿಟ್ಟಿನಲ್ಲಿ ಅಕ್ರಮ ಮಣ್ಣು ಸಾಗಾಟದ ಸಂಬಂಧ ಗಣಿ ಮತ್ತು ಬೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಪರಿಶೀಲನೆ ನಡೆಸಬೇಕಿದೆ.
SUMMARY | Soil that is to be used for government works is being supplied to private layouts. This has raised a serious suspicion. In this regard, a complaint has also been submitted to the Assistant Executive Engineer, Public Works, Port and Inland Transportation Department, Thirthahalli Sub-Division.
KEY WORDS | Soil that is to be used for government works is being supplied to private layouts. Assistant Executive Engineer, Public Works, Port and Inland Transportation Department, Thirthahalli Sub-Division