ಸಕ್ರೆಬೈಲ್‌ ಕ್ರಾಲ್‌ನಲ್ಲಿ ಸಿನಿಮಾ ಚಿತ್ರೀಕರಣ ಜೋರು | ನಿರ್ಬಂಧಿತ ವಲಯದಲ್ಲಿ ಹೇಗೆ ನಡೆಯುತ್ತಿದೆ ಶೂಟಿಂಗ್?!‌ ಅರಣ್ಯ ಸಚಿವರ ಗಮನಕ್ಕಿದ್ಯಾ?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 7, 2025 ‌‌  

ಶಿವಮೊಗ್ಗದ ಪ್ರಖ್ಯಾತ ಸಕ್ರೆಬೈಲ್‌ ಆನೆ ಬಿಡಾರದಲ್ಲಿ ಆನೆ ಪಳಗಿಸುವ ಆನೆ ಕ್ಯಾಂಪ್‌ನಲ್ಲಿ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದೆ. ಅದಕ್ಕಾಗಿ ಅಲ್ಲಿ ಸೆಟ್‌ಗಳನ್ನು ಸಹ ಹಾಕಲಾಗಿದೆ. ಕ್ಯಾಂಪ್‌ನಲ್ಲಿ ಮಾಧ್ಯಮಗಳನ್ನೂ ಬಿಡಲು ಅನುಮತಿ ಇಲ್ಲವೆನ್ನುವ ಅರಣ್ಯ ಇಲಾಖೆ, ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಮೇಲಾಗಿ, ಇಲ್ಲಿನ ಆನೆಗಳನ್ನು ಸಹ ಶೂಟಿಂಗ್‌ಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿದೆ.

- Advertisement -

ಈ ನಿಟ್ಟಿನಲ್ಲಿ ಪರಿಸರ ಆಸಕ್ತರು ಆಕ್ಷೇಪ ಎತ್ತಿದ್ದಾರೆ. ಪ್ರಾಣಿ ಸೂಕ್ಷ್ಮವಲಯದಲ್ಲಿ ಅನುಮತಿಯಿಲ್ಲೆ ಏನನ್ನೂ ಚಿತ್ರೀಕರಿಸುವಂತಿಲ್ಲ. ಇನ್ನೂ ಅರಣ್ಯ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ ಸೇರಿದಂತೆ ವಿವಿದ ರೀತಿಯ ಚಿತ್ರೀಕರಣಕ್ಕೆ ಅವಕಾಶ ನೀಡುವ ಸಂಬಂಧ ಈಗಾಗಲೇ ಅರಣ್ಯ ಸಚಿವರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಸಂಬಂಧ ಉಪ ಅರಣ್ಯ ಸಂರಕ್ಷಣಾಧಿಕಾರಿಯಿಂದಲೇ ಚಿತ್ರೀಕರಣಕ್ಕೆ ಅನುಮತಿ ಪಡೆಯಬೇಕು ಎಂದು ಸೂಚಿಸಿದ್ದಾರೆ. ಇನ್ನೂ ವನ್ಯಜೀವಿ ವಲಯದಲ್ಲಿ ವನ್ಯಜೀವಿಗಳ ಚಿತ್ರೀಕರಣ ಸಂಬಂಧವೂ ಕೆಲವು ನಿಯಮಗಳಿವೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಸಿನಿಮಾ ಶೂಟಿಂಗ್‌ಗಾಗಿ ಪರ್ಮಿಶನ್‌ ತೆಗೆದುಕೊಂಡಿದ್ದಾರೆಯೇ ಎಂಬುದಕ್ಕೆ ಅರಣ್ಯ ಇಲಾಖೆಯ ಮೂಲಗಳಿಂದ ಉತ್ತರ ಲ‍ಭ್ಯವಾಗಿಲ್ಲ. 

ಆನೆಯಂತಹ ಸೂಕ್ಷ್ಮ ಜೀವಿಗಳು ಸ್ವಚ್ಚಂದವಾಗಿರಬೇಕಾದ ತಾಣದಲ್ಲಿ ಚಿತ್ರೀಕರಣದಿಂದಾಗಿ ಅವುಗಳಿಗೆ ಕಿರಿಕಿರಿ ಆಗುವುದಿಲ್ಲವೆ ಎಂಬ ಪ್ರಶ್ನೆ ಪರಿಸರ ಪ್ರಿಯರದ್ದಾಗಿದೆ. ಮೇಲಾಗಿ ಸಾಕಾನೆಗಳ ಚಿತ್ರೀಕರಣ ವಿಚಾರವಾಗಿ ಅರಣ್ಯ ಸಚಿವರು ಸಹ ಸಾಕಷ್ಟು ಗಂಭೀರ ಸಲಹೆಗಳನ್ನು ನೀಡಿದ್ದರು. ಅದರಲ್ಲಿಯು ಕ್ರಾಲ್‌ನಲ್ಲಿನ ಆನೆಗಳನ್ನು ಮುಟ್ಟುವಂತಿಲ್ಲ, ಅದರ ಚಿತ್ರ ತೆಗೆಯುವಂತಿಲ್ಲ, ವಿಡಿಯೋ ಶೂಟ್‌ ಮಾಡುವಂತಿಲ್ಲ ಎಂಬೆಲ್ಲಾ ನಿಯಮಗಳಿವೆ. ಇದೇ ರೀತಿಯಲ್ಲಿ ಹಿಂದೊಮ್ಮೆ ಆನೆಗಳ ಚಿತ್ರೀಕರಣ ಮಾಡಿದ್ದವರಿಗೆ ಅರಣ್ಯ ಇಲಾಖೆ ನೋಟಿಸ್‌ ಸಹ ನೀಡಲಾಗಿದೆ. 

ಇದೆಲ್ಲದರ ಹೊರತಾಗಿ ಸದ್ಯ ಕಳೆದ ಐದು ದಿನಗಳಿಂದ ಸಕ್ರೆಬೈಲ್‌ ಕ್ರಾಲ್‌ ಬಳಿ ಸಾಕಾನೆಯೊಂದನ್ನು ಬಳಸಿಕೊಂಡು ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಸಿನಿಮಾ ಶೂಟಿಂಗ್‌ ಗಾಗಿ ಆನೆಗೆ ಬಣ್ಣವನ್ನು ಬಳಿಯಲಾಗಿದೆ. ಇವತ್ತ ಸಹ ಚಿತ್ರೀಕರಣ ಮುಂದುವರಿದಿದ್ದು ಇದಕ್ಕೆಲ್ಲಾ ಪರ್ಮಿಶನ್‌ ಕೊಟ್ಟವರು ಯಾರು? ಅನುಮತಿಗಾಗಿ ಪಡೆದ ಶುಲ್ಕವೆಷ್ಟು? ಅಸಲಿಗೆ ಯಾವ ಪ್ರಕ್ರಿಯೆಯನ್ನು ಈ ವಿಚಾರದಲ್ಲಿ ಪಾಲಿಸಲಾಗಿದೆ ಎಂಬುದು ಪ್ರಶ್ನೆ! ಮಾನ್ಯ ಅರಣ್ಯ ಇಲಾಖೆ ಉತ್ತರಿಸಬೇಕಿದೆ

 

SUMMARY |   film shooting in sakrebailu elephant camp

KEY WORDS | film shooting in sakrebailu elephant camp

Share This Article
Leave a Comment

Leave a Reply

Your email address will not be published. Required fields are marked *