SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಬಳಿ ಇರುವ ಟಿವಿ ಟವರ್‌ನಲ್ಲಿ ಭದ್ರಾವತಿ ಆಕಾಶವಾಣಿಯ ಮತ್ತೊಂದು ಟವರ್ ನಿರ್ಮಿಸಿ ಅದರ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಬಗ್ಗೆ ಈಗಾಗಲೇ ನಿಮಗೆ ಮಾಹಿತಿ ಇದೀಗ ಈ ಅದರ ಬಗ್ಗೆ ಮತ್ತೊಂದು ಅಪ್‌ಡೇಟ್ ಸಿಕ್ಕಿದೆ. ಭದ್ರಾವತಿ ಆಕಾಶವಾಣಿಯು ಬರುವ ದಿನಗಳಲ್ಲಿ ಎಫ್‌ಎಂ ಸ್ಟೇಷನ್ ಆಗಿ ಬದಲಾಗಲಿದ್ದು ವಿವಿಧ ಕಾರ್ಯಕ್ರಮಗಳನ್ನು ಒದಗಿಸುವ ಸಾಧ್ಯತೆ ಇದೆ. ಈ ಸಂಬಂಧ ಸುಮಾರು 10 ಕೋಟಿ ರೂಪಾಯಿ ಮೌಲ್ಯದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಬಳಿಕ ಭದ್ರಾವತಿ ಆಕಾಶವಾಣಿ ವ್ಯಾಪ್ತಿಯು ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಗದಗ, ಹಾವೇರಿ, ಚಿತ್ರದುರ್ಗ, ತುಮಕೂರು, ಉಡುಪಿ ಜಿಲ್ಲೆಗಳಿಗೂ ವ್ಯಾಪಿಸಲಿದೆ.
ಸದ್ಯ ಇದಕ್ಕಾಗಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಇರುವ ಡಿಡಿ ಟಿವಿ ಟವರ್‌ನಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದ್ದು, ಟವರ್‌ನ ತುದಿಯಲ್ಲಿ ಆಂಟೆನಾ ಅಳವಡಿಸಲಾಗುತ್ತಿದೆ. ಜನರೇಟರ್‌ನ್ನು ಈಗಾಗಲೇ ಅಳವಡಿಸಲಾಗಿದೆ. ಅಲ್ಲದೆ ಪ್ಯಾಚ್ ವರ್ಕ್‌ಗಳನ್ನು ಈಗಾಗಲೇ ಕಂಪ್ಲೀಟ ಮಾಡಲಾಗಿದೆ. ಕೆನಡಾದಿಂದ ಟ್ರಾನ್ಸಮೀಟರ್ ಬರಬೇಕಿದ್ದು, ಅದರ ಆಗಮನದ ಬಳಿಕ ಏಪ್ರಿಲ್ ತಿಂಗಳಿನಲ್ಲಿ ಟ್ರಾನ್ಸ್‌ಮೀಟರ್ ಅಳವಡಿಕೆ ಕಾರ್ಯ ನಡೆಯಲಿದೆ. ಆನಂತರ ಶಿವಮೊಗ್ಗವೂ ಸೇರಿದಂತೆ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿವಿದ ಮನರಂಜನಾ ಕಾರ್ಯಕ್ರಮಗಳು ಶಿವಮೊಗ್ಗದಿಂದಲೇ ಪ್ರಸಾರವಾಗಲಿದೆ.
SUMMARY | FM to be established at Bhadravati Akashvani and Shivamogga TV Tower, Shivamogga Sahyadri College, Shivamogga
KEY WORDS |Shivamogga fm live,Shivamogga fm live today ,Shivamogga fm frequency, Shivamogga fm contact number, Bhadravati Akashvani, Shivamogga TV Tower, Shivamogga Sahyadri College, Shivamogga