ಡಿವೈಡರ್‌ ದಾಟಿ ಹಾರಿ ಬಂದು ಕಾರಿನ ಮೇಲೆ ಬಿದ್ದ ಮಹಿಂದ್ರಾ | ಬೆಂಗಳೂರಿನ ತಾಯಿ, ಮಗಳು, ಅಳಿಯ, ಮೊಮ್ಮಗ ಸಾವು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌  

ಹಾವೇರಿ ಜಿಲ್ಲೆ ಶಿಗ್ಗಾವಿಯ ತಡಸ ಕ್ರಾಸ್‌ನಲ್ಲಿ ಸಿಗುವ ತಿಮ್ಮಾಪುರ ಸಮೀಪ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯಲ್ಲಿ ಬೆಂಗಳೂರು ಚಾಮರಾಜಪೇಟೆಯ ಚಂದ್ರಮ್ಮ, ಮಗಳು ಮೀನಾ , ಅಳಿಯ ಮಹೇಶ್‌ಕುಮಾರ್ ,ಮಗ ಧನ್ವೀರ್ ಸಾವನ್ನಪ್ಪಿದ್ದಾರೆ

ದಾವಣಗೆರೆ ಜಿಲ್ಲೆಯ ಹರಿಹರದ ಮಹೇಶ್‌ಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದರು. ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಬಂದಿದ್ದ ಅವರು ವಾಪಸ್‌ ಬೆಂಗಳೂರಿಗೆ ತೆರಳುವಾಗ ಘಟನೆ ಸಂಭವಿಸಿದೆ. ಮಹಾರಾಷ್ಟ್ರ  ನೋಂದಣಿಯಿದ್ದ ಮಹೀಂದ್ರ ಎಕ್ಸ್‌ಯುವಿ ಕಾರು ಬೆಂಗಳೂರು ಕಡೆಯಿಂದ ಹುಬ್ಬಳ್ಳಿಯತ್ತ ಹೊರಟಿತ್ತು. ತಡಸ ಕ್ರಾಸ್‌ ಬಳಿ ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಮಹೇಶ್‌ಕುಮಾರ್ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ ಮಹಿಂದ್ರಾ ಕಾರು ಚಾಲಕ ಪರಾರಿಯಾಗಿದ್ದಾರೆ.

SUMMARY | Four members of the same family died in an accident between two cars near Thimmapur, located at Tadasa Cross in Shiggavi, Haveri district.

KEY WORDS |Four members of the same family died in an accident , Thimmapur, Tadasa Cross in Shiggavi, Haveri district

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor