ಶಿವಮೊಗ್ಗ ಸುತ್ತುವ ಬಸ್‌ನೊಳಗೆ, ತಿಂಗಳ ಸಂಬಳದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವ ಕಂಡೆಕ್ಟರ್‌ | ಯಾರದು? JP ಬರೆಯುತ್ತಾರೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 1, 2024  

ಶಿವಮೊಗ್ಗ ಇಂದು ದೀಪಾವಳಿ, ಜೊತೆಯಲ್ಲಿ ಕನ್ನಡಮ್ಮನ ಹಬ್ಬ ಕನ್ನಡ ರಾಜ್ಯೋತ್ಸವ. ಸಿರಿಗನ್ನಡದ ಉತ್ಸವವನ್ನು ವಿಶೇಷವಾಗಿ ಕಳೆದ 20 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಕಂಡೆಕ್ಟರ್‌ ಒಬ್ಬರು ಇದೀಗ ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿಶಿಷ್ಟ ಕನ್ನಡ ಪ್ರೇಮದ ಸ್ಟೋರಿ ನಿಮ್ಮ ಮುಂದೆ 

- Advertisement -

 

ಈ ಸಲ ಶಿಕಾರಿಪುರ KSRTC ಘಟಕವೇ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿರುವುದು ನಟರಾಜ್‌ ಕುಂದೂರ್‌ ಎಂಬ ಅಪ್ಪಟ ಕನ್ನಡ ಪ್ರೇಮಿ KSRTC ಯಲ್ಲಿ ನಿರ್ವಾಹಕರಾಗಿ ದುಡಿಯುತ್ತಿರುವ ಇವರು ತಾವು ಕೆಲಸ ನಿರ್ವಹಿಸುವ ಬಸ್‌ಗಳಲ್ಲಿ ಕನ್ನಡ ಪ್ರೇಮವನ್ನು ಮೆರೆಯುತ್ತಿದ್ದಾರೆ. ಚಾಮರಾಜನಗರ ಜಿಲ್ಲೆ ಕೆಲಸ ಮಾಡುತ್ತಿದ್ದಾಗ ಆರಂಭಿಸಿದ ಇವರ ಕನ್ನಡದ ಕೆಲಸ ಇವತ್ತಿಗೂ ಮುಂದುವರಿದಿದೆ. ಸದ್ಯ ಶಿಕಾರಿಪುರ ಘಟಕದಲ್ಲಿ ಕೆಲಸ ಮಾಡುತ್ತಿರುವ ಇವರು ಸೊರಬ, ಶಿಕಾರಿಪುರ ಶಿವಮೊಗ್ಗ ರೂಟ್ನ ಬಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

Malenadu Today

 

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಸ್‌ನ್ನ ಕನ್ನಡ ತಾಯಿಯ ರಥದಂತೆ ಸಿಂಗರಿಸಿದ್ದಾರೆ. ಇವರ ಸಹೋಧ್ಯೋಗಿಗಳು ನಟರಾಜ್‌ರವರ ಕನ್ನಡದ ಕೆಲಸಕ್ಕೆ ಕೈ ಜೋಡಿಸುತ್ತಿದ್ದಾರೆ. ಸಾರಿಗೆ ವಾಹನವನ್ನ ಕನ್ನಡದ ಮನೆಯನ್ನಾಗಿಸಿಕೊಂಡಿರುವ ನಟರಾಜ್‌  ರಾಜ್ಯೋತ್ಸವದ ಸಂದರ್ಭದಲ್ಲಿ ವಾಹನದೊಳಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳ ಭಾವ ಚಿತ್ರಗಳು. ಕನ್ನಡದ ಮಹಾನ್ ಕವಿಗಳು ಹಾಗೂ  ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಭಾವ ಚಿತ್ರಗಳು, ನಾಡಗೀತೆಗಳು, ಕರ್ನಾಟಕದ ಜಿಲ್ಲೆಗಳ ನಕ್ಷೆ ಮತ್ತು ವಿವರಗಳನ್ನ ಚಿತ್ರಗಳ ಮೂಲಕ ವಿವರಿಸುವ ಪ್ರಯತ್ನ ಮಾಡಿತ್ತಾರೆ. ಬಸ್‌ನ ಹೊರಭಾಗದಲ್ಲಿ ರಾಜ್ಯದ ನದಿಗಳ ಹೆಸರನ್ನ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. 

 

ತಿಂಗಳ ವೇತನದಲ್ಲಿ 2000  ರೂಪಾಯಿಯನ್ನ ಕನ್ನಡದ ಕೆಲಸಕ್ಕಾಗಿ ಮೀಸಲಿಡುವ ಇವರ ಕನ್ನಡದ ಸೇವೆ ನಿಜಕ್ಕೂ ಹಾಡಿ ಹೊಗಳಲು ಅರ್ಹವಾದದು. ಮೂಲತಃ ದಾವಣಗೆರೆಯ ಹೊನ್ನಾಳಿಯವರಾದ ಇವರು ಚುಟುಕು ಕವಿ ಕೂಡ ಹೌದು, ದಾವಣಗೆರೆ, ತುಮಕೂರು, ಬಳ್ಳಾರಿ, ಹಾವೇರಿ, ಚಿತ್ರದುರ್ಗ, ಚಮರಾಜನಗರ, ಹಾಸನ, ಶಿವಮೊಗ್ಗ, ಬೆಂಗಳೂರು ಹಾಗೂ ಹುಬ್ಬಳ್ಳಿ ಸೇರಿದಂತೆ ಹಲವೆಡೆ ಇವರು ಹಾಗೂ ಇವರು ಸಿಂಗರಿಸಿದ ಸರ್ಕಾರಿ ಸಾರಿಗೆ ವಾಹನವೂ ಸನ್ಮಾನಗೊಂಡಿದೆ. 

Malenadu Today

 

ನನ್ನ ಜೀವನದ ನಂಬಿಕೆ ಕನ್ನಡ ಎನ್ನುವ ನಟರಾಜ್‌ ಸದ್ಯ ಸೊರಬ ಶಿಕಾರಿಪುರ ಶಿವಮೊಗ್ಗ ಬಸ್‌ನ್ನ ಕನ್ನಡಮ್ಮನ ಥೇರಿನ ರೀತಿಯಲ್ಲಿ ಸಿಂಗರಿಸಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಎಲ್ಲಾದರೂ ಇರು ಎಂತಾದರು ಇರು ಮನೆ ಮನದಲ್ಲಿ ಕನ್ನಡಿಗರನಾಗಿರು ಎನ್ನುತ್ತಾ ತಮ್ಮ ವಾಹನ ಏರುವ  ಪ್ರಯಾಣಿಕರಿಗೆ ಕನ್ನಡದ ಸಂದೇಶ ಸಾರುತ್ತಿದ್ದಾರೆ. 

 

pro kabaddi points table 2024

 

SUMMARY | A unique story of a KSRTC conductor who celebrates Kannada Rajyotsava in a unique bus 

 

KEYWORDS |  unique story of a KSRTC conductorcelebrates Kannada Rajyotsava in bus

Share This Article