ಶಿವಮೊಗ್ಗ ಸಿಂಹಧಾಮಕ್ಕೆ ಹೋಗುವ ಸಂದರ್ಭದಲ್ಲಿ ಇನ್ಮೇಲೆ ಇದನ್ನು ಮಿಸ್‌ ಮಾಡಿಕೊಳ್ಳಬೇಡಿ!

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 4, 2025 ‌‌ ‌

ಶಿವಮೊಗ್ಗದ ಪ್ರಾಣಿಪ್ರಿಯರಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಪ್ರವಾಸಿಗರಿಗಾಗಿ ಮಂಗಳವಾರದ ರಜೆಗಳನ್ನು ಮುಂದೂಡುತ್ತಿದ್ದ ಸಿಂಹಧಾಮದ ಆಡಳಿತ ವ್ಯವಸ್ಥೆ ಇದೀಗ ಪ್ರವಾಸಿಗರಿಗಾಗಿ ಇನ್ನೊಂದು ವ್ಯವಸ್ಥೆಯನ್ನು ಕಲ್ಪಿಸಿದೆ.   

- Advertisement -

ಮೃಗಾಲಯಕ್ಕೆ ಬರುವ ಪ್ರವಾಸಿಗೃಿಗಾಗಿ, 3ಡಿ ಥಿಯೇಟರ್‌ ಅನುಭವ ನೀಡುವ 3ಡಿ ವರ್ಚ್ಯುವಲ್ ಝೂ ಅನ್ನು ಜಾರಿಗೊಳಿಸಿದೆ. ಇಲ್ಲಿನ ಹಳೆಯ ಬಸ್‌ವೊಂದನ್ನು ಝೂವಿಸ್ಟಾ ಯೋಜನೆ ಅಡಿ ಮಾರ್ಪಾಡು ಈ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದಾಗಿ ಬಸ್‌ನಲ್ಲಿ ಕುಳಿತು ಇಡೀ ಮೃಗಾಲಯದ ಪ್ರಾಣಿಗಳ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. 

ಕಾಡು ಪ್ರಾಣಿಗಳನ್ನು ತೀರಾ ಸಮೀಪದಿಂದ ನೋಡಲು ಸಾಧ್ಯವಾಗುವಂತಹ ವಿಆರ್‌ ಸೃಷ್ಟಿಯನ್ನು ಈ ವಾಹನದಲ್ಲಿ ಕಲ್ಪಿಸಲಾಗಿದೆ. 15 ವರ್ಷಕ್ಕಿಂತ ಹಳೆಯದಾದ ಸಫಾರಿ ವಾಹನವನ್ನು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರ್ಪಾಡು ಮಾಡಿ ವರ್ಚ್ಯುವಲ್‌ ರಿಯಾಲಿಟಿಯ ಥಿಯೇಟರ್‌ ಮಾದರಿಯಲ್ಲಿ ರೂಪುಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *