ಶಿವಮೊಗ್ಗ ಬೆಂಗಳೂರು ಫ್ಲೈಟ್‌ನಲ್ಲಿ ಸಚಿವರ ಜೊತೆ S ಬಂಗಾರಪ್ಪನವರ ಒಡನಾಡಿಗಳ ಪ್ರಯಾಣ! ಹೇಗಿತ್ತು ಟೂರ್!?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Mar 3, 2025 ‌‌  

ಸಚಿವ ಮಧು ಬಂಗಾರಪ್ಪನವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ದಿನ ಅವರ ತಂದೆ ಎಸ್‌ ಬಂಗಾರಪ್ಪನವರ ಜೊತೆಗಿದ್ದ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ಯಲಾಗಿತ್ತು. 

Malenadu Today

ಈ ಮೊದಲೇ ಹೇಳಿದಂತೆ ಸಚಿವ ಮಧು ಬಂಗಾರಪ್ಪ ಎಸ್. ಬಂಗಾರಪ್ಪ ಅವರ 38 ಒಡನಾಡಿಗಳೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು. ಆ ಮೂಲಕ ಅವರ ಕನಸು ನನಸಾಗಿಸಿದರು. ತಮ್ಮ ತಂದೆಯವರ ಒಡಗನಾಡಿಗಳಲ್ಲಿ ವಿಶೇಷ ಅನುಭವ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದ ಮಧು ಬಂಗಾರಪ್ಪ ಈ ವಿಮಾನಯಾನ ಅವರ ನೆನಪಿನಲ್ಲಿ ಉಳಿಯುವ ಒಂದು ಅನುಭವವಾಗಿದೆ ಎಂದರು. 

Malenadu Today

ಇದಕ್ಕೂ ಮೊದಲು ಸೊರಬದ ಬಂಗಾರಧಾಮದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶಾಲಾ ಮತ್ತು ಸಾಕ್ಷರತಾ ಖಾತೆ ಸಚಿವ ಎಸ್‌.ಮಧು ಬಂಗಾರಪ್ಪ ಬಳಿಕ ಸಂಜೆ ಹೊತ್ತಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲಿ ಎಂ ಶ್ರಿಕಾಂತ್‌ ಹಾಗೂ ಅವರ ಅಭಿಮಾನಿ ಬಳಗದ ಜೊತೆ ದೊಡ್ಡ ಗ್ರೀನ್‌ ಕೇಕ್‌ ಕಟ್‌ ಮಾಡಿದ ಮಧು ಬಂಗಾರಪ್ಪ, ಶ್ರೀಕಾಂತ್‌ರಿಂದ ಶುಭಾಶಯಗಳನ್ನ ಸ್ವೀಕರಿಸಿದರು. 

Malenadu Today

ಇನ್ನೂ ಬೆಂಗಳೂರಿನ ಕಾರ್ಯಕ್ರಮಕ್ಕೆ ತಮ್ಮೊಂದಿಗೆ ಸಚಿವ ಮಧು ಬಂಗಾರಪ್ಪ ಸೊರಬ ತಾಲೂಕಿನ 38 ಮಂದಿ ಬಂಗಾರಪ್ಪನವರ ಅನುಯಾಯಿಗಳನ್ನು ತಮ್ಮ ಜೊತೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದಾರೆ. 

Malenadu Today

 

ಇವರನ್ನ ಇವತ್ತು ಬೆಂಗಳೂರಿನ ವಿವಿದೆಡೆ ಸುತ್ತಾಡಿಸಿ, ಅಲ್ಲಿನ ಚಿತ್ರಣವನ್ನು ತೋರಿಸಿ ಬಳಿಕ ಶಿವಮೊಗ್ಗಕ್ಕೆ ಪುನಃ ವಿಮಾನದಲ್ಲಿ ವಾಪಸ್‌ ಕರೆದುಕೊಂಡು ಬರಲಿದ್ದಾರೆ. 

Malenadu Today

ಈ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ  ಸುಮಾರು 38 ಜನ ನಮ್ಮ ತಂದೆ ಬಂಗಾರಪ್ಪ ಅವರ ಒಡನಾಡಿಗಳನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ನಾವು ಇಂದು ಕಾರಿನಲ್ಲಿ‌ ಓಡಾಡುತ್ತಾ, ವಿಮಾನ ಹತ್ತಿದ್ದೇವೆ ಎಂದಾದರೆ ಅದು ಬಂಗಾರಪ್ಪನವರ ಅನುಯಾಯಿಗಳಿಂದಾಗಿ. ಹಾಗಾಗಿ ಏನಾದರೂ ಅವರಿಗೆ ಮಾಡಬೇಕು ಎಂದು ಬಂಗಾರಪ್ಪರವರ ಒಡನಾಡಿಗಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ. 

Malenadu Today

ಇದೇ ವೇಳೆ ಮಾತನಾಡಿದ ಬಂಗಾರಪ್ಪರವರ ಅನುಯಾಯಿ ಒಬ್ಬರು ಬಂಗಾರಪ್ಪನವರು ಈ ಹಿಂದೆ ಬೆಂಗಳೂರು, ದೆಹಲಿಗೆ ಕರೆದುಕೊಂಡು ಹೋಗುತ್ತಿದ್ದರು. ಇದೀಗ ಅವರ ಮಗ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿರುವುದು ಇನ್ನಷ್ಟು ಖುಷಿ ಕೊಡುತ್ತಿದೆ ಎಂದಿದ್ಧಾರೆ. 

Malenadu Today

 

Share This Article