ಇವತ್ತಿನಿಂದ ನೀರು ಸರಬರಾಜು ನೌಕರರ ಮುಷ್ಕರ | ನೀರು ಪೂರೈಕೆಯಲ್ಲಿ ಅಗುತ್ತಾ ತೊಂದರೆ!?

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Mar 3, 2025 ‌‌  

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ನೀರು ಗುತ್ತಿಗೆ ಸರಭರಾಜು ಹೊರಗುತ್ತಿಗೆ ನೌಕರರು ಇವತ್ತಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಇದರಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

20 ವರ್ಷಗಳಿಂದ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವವರಿಗೆ ಯಾವುದೇ ಸೌಲಭ್ಯಗಳು ನೀಡಿಲ್ಲ, ಬೇಡಿಕೆಗಳನ್ನ ಈಡೇರಿಸಿಲ್ಲ ಎಂಬುದು ನೌಕರರ ಆರೋಪ ಇದೇ ಕಾರಣಕ್ಕೆ 116 ಹೊರಗುತ್ತಿಗೆ ನೌಕರರು ತಮ್ಮ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. 

ಸರ್ಕಾರ ನೀರು ಸರಬರಾಜು ನೌಕರರನ್ನು ನೇರ ನೇಮಕಾತಿ ಮೂಲಕ ನೇಮಿಸಿಕೊಳ್ಳುವ ಸಲುವಾಗಿ ಜಿಲ್ಲಾ ನಗರಾಭಿವೃದ್ದಿ ಕೋಶದಿಂದ ಮಾಹಿತಿ ಪಡೆದುಕೊಂಡಿದೆ. ಆದರೆ ಇಲ್ಲಿಯವರೆಗೂ ಆದೇಶವಾಗಿಲ್ಲ. ಇನ್ನೊಂದೆಡೆ ಹೈಕೋರ್ಟ್‌ ಸೂಚನೆಯಂತೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂಬುದು ನೌಕರರ ಆರೋಪವಾಗಿದೆ. ಇದೇ ಕಾರಣಕ್ಕೆ ಇದೀಗ ಮುಷ್ಕರ ಆರಂಭಿಸಲಿದ್ದು, ಬೇಡಿಕೆ ಈಡೇರುವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎನ್ನುತ್ತಿದ್ದಾರೆ.

 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor