SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024
ವರ್ಷದ ಗುತ್ತಿಗೆ ಆಧಾರದ ಮೇಲೆ ರಾಜ್ಯದ ಕಾರಾಗೃಹಗಳಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಿಸುವ ಸಂಬಂಧ ಅರ್ಜಿ ಕರೆಯಲಾಗಿದೆ.
ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಇಲಾಖೆಯಿಂದ ಆಸಕ್ತ ಮಾಜಿ ಸೈನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ.
ಈ ಸಂಬಂಧ ಆಸಕ್ತ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದ ಮಾಜಿ ಸೈನಿಕರು ತಮ್ಮ ಇಚ್ಚೆಯನ್ನು ದಿನಾಂಕ 25-11-2024 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 01.00 ಗಂಟೆಯೊಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-220925 ಗೆ ಕರೆ ಮಾಡಿ ತಿಳಿಸಲು ಕೋರಲಾಗಿದೆ.
ಶಿವಮೊಗ್ಗ – 30, ದಾವಣಗೆರೆ – 5 ಮತ್ತು ಚಿತ್ರದುರ್ಗ – 4 ಹುದ್ದೆಗಳು ಖಾಲಿ ಇದ್ದು ಒಂದು ವರ್ಷದ ಗುತ್ತಿಗೆ ಅವಧಿಯು ಅವಶ್ಯಕತೆಗೆ ಅನುಗುಣವಾಗಿ ಮುಂದುವರೆಸುವ ಅವಕಾಶವೂ ಸಹ ಇರುತ್ತದೆ ಎಂಬುದನ್ನು ತಮ್ಮ ಮಾಹಿತಿಗಾಗಿ ನೀಡಿದೆ.
ಕರ್ತವ್ಯದ ಅವಧಿಯು 8 ಗಂಟೆಗಳು ಮೂರು ಶಿಫ್ಟ್ ಆಗಿದ್ದು, ವೇತನ ರೂ. 28,499/- ಆಗಿರುತ್ತದೆ. ಆಸಕ್ತರ ಪಟ್ಟಿಯನ್ನು ಈ ಇಲಾಖೆಯ ನಿರ್ದೇಶನಾಲಯಕ್ಕೆ ದಿನಾಂಕ 25-11-2024 ರಂದೇ ನೀಡಬೇಕಾಗಿರುವುದರಿಂದ ಹೆಚ್ಚಿನ ಸಮಯವಕಾಶವಿರುವುದಿಲ್ಲ.
ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ರವರ ಆದೇಶದ ಮೇರೆಗೆ ಮೇಲಿನ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
SUMMARY | inviting applications from interested ex-servicemen to work on contract basis for a period of one year for the post of Warden in jails across the State of Karnataka.
KEY WORDS | ex-servicemen, contract basis, post of Warden in jails, State of Karnataka.