SHIVAMOGGA | MALENADUTODAY NEWS | ಮಲೆನಾಡು ಟುಡೆ Jan 19, 2025
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕೆಂಚನಾಲ ಗ್ರಾಮದ ರೈಲ್ವೆ ನಿಲ್ದಾಣದ ಬಳಿಯಲ್ಲಿ ಬೀದಿ ನಾಯಿಯೊಂದನ್ನ ಕಲ್ಲು ಎತ್ತಿಹಾಕಿ ಕೊಂದಿದ್ದಷ್ಟೆ ಅಲ್ಲದೆ ಅದನ್ನು ಆಟೋಕ್ಕೆ ಕಟ್ಟಿ ಎಳೆದೊಯ್ದ ಪ್ರಕರಣವೊಂದು ಇವತ್ತು ವರದಿಯಾಗಿದೆ. ಈ ಸಂಬಂಧ ಮನೆಕಾ ಸಂಜಯ್ ಗಾಂಧಿಯವರಿಗೆ ವ್ಯಕ್ತಿಯೊಬ್ಬರು ಇಮೇಲ್ ಮಾಡಿದ್ದು, ಅವರು ಘಟನೆ ಕುರಿತಾಗಿ ಎಸ್‌ಪಿ ಹಾಗೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳ ಬಗ್ಗೆ ವಿಷಯ ಚರ್ಚಿಸಿದ್ದಾರೆ. ಮಾಜಿ ಕೇಂದ್ರ ಸಚಿವೆ ಹಾಗೂ ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮನೆಕಾ ಗಾಂಧಿ ಘಟನೆ ಕುರಿತು ಕ್ರಮಕೈಗೊಳ್ಳುವಂತೆ ಒತ್ತಾಇಸಿದ್ದಾರೆ. ಇನ್ನೂ ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಇಲ್ಲಿನ ಆಟೋ ಚಾಲಕನೊಬ್ಬರು ಯಾಕಾಗಿ ಬೀದಿ ನಾಯಿ ಮೇಲೆ ಈ ಪರಿಯ ದ್ವೇಷ ತೀರಿಸಿಕೊಂಡರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. ಆದರೆ ಈತನ ಕೃತ್ಯ ಸೆರೆಯಾಗಿರುವ ವಿಡಿಯೋದಲ್ಲಿ ಚಾಲಕ ಮಲಗಿದ್ದ ನಾಯಿಯ ಮೇಲೆ ಕಲ್ಲು ಎತ್ತಿಹಾಕಿ ಅದನ್ನು ಆಟೋಕ್ಕೆ ಎಳೇದೊಯ್ದಿದ್ದಾನೆ. ಮೇಲ್ನೋಟಕ್ಕೆ ಯಾವುದೇ ಬೇರೆಯ ಸಿಟ್ಟನ್ನು ನಾಯಿಯ ಮೇಲೆ ಆತ ತೋರಿರುವ ಸಾಧ್ಯತೆ ಇದೆ. ಸದ್ಯ ಮನೇಕಾ ಗಾಂದಿ ಮಧ್ಯಪ್ರವೇಶದಿಂದಾಗಿ ಬೀದಿ ನಾಯಿಯ ಮೇಲಿನ ಅಮಾನುಷ ಹಲ್ಲೆ ಹಾಗೂ ಕೊಲೆ ಸಂಬಂಧ ಕೇಸ್ ದಾಖಲಾಗಿದೆ. ನಡೆದ ಘಟನೆಯನ್ನು ಯುವಕನೊಬ್ಬ ವಿಡಿಯೋ ಮಾಡಿಕೊಂಡಿದ್ದು, ಆ ವಿಡಿಯೋವನ್ನು ಮನೇಕಾ ಗಾಂಧಿಯವರಿಗೆ ಇಮೇಲ್ ಮೂಲಕ ತಲುಪಿಸಿ, ಅವರ ಮೂಲಕ ಪೊಲೀಸ್ ಇಲಾಖೆಗೆ ಒತ್ತಡ ತಂದಿದ್ದು ವಿಶೇಷವಾಗಿದೆ.
SUMMARY | video has surfaced showing a stray dog being killed with a stone and then tied to an auto and dragged away near Kenchanal, Hosanagar taluk, Shimoga district. Maneka Sanjay Gandhi has urged Rippanpet police station staff in this regard.
KEY WORDS | stray dog killed with a stone and tied and dragged in auto, Kenchanal, Hosanagar taluk, Shimoga district, Maneka Sanjay Gandhi, Rippanpete police station,