ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಕೊಲೆ | ಪತಿ ಯೂಸುಫ್‌ನಿಂದ ಪತ್ನಿ ರುಕ್ಸಾನಳ ಹತ್ಯೆ | ಎಸ್‌ಪಿ ಹೇಳಿದ್ದೇನು?

13

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌  

ಶಿವಮೊಗ್ಗದ ವಾದಿ ಏ ಹುದಾ ಏರಿಯಾದಲ್ಲಿ ಪತ್ನಿಯನ್ನ ಪತಿಯು ಕೊಲೆ ಮಾಡಿದ್ದಾನೆ. ಈ ಬಗ್ಗೆ ಸ್ವತಃ ಎಸ್‌ಪಿ ಮಿಥುನ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ವಾದಿ ಏ ಹುದಾ ಎರಿಯಾದಲ್ಲಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ.

ಕೌಟುಂಬಿಕ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ರುಕ್ಸಾನಾ (38) ಎಂಬಾಕೆ ಮೃತಪಟ್ಟವಳು. ಈಕೆ ಯೂಸುಫ್‌ ಎಂಬವರನ್ನ ಮದುವೆಯಾಗಿದ್ದರು. ಇವರಿಗೆ ಮೂರು ಮಕ್ಕಳಿದ್ದರು. ಇವತ್ತು ಇವರಿಬ್ಬರ ನಡುವೆ ಜಗಳವಾಗಿ ಯೂಸುಪ್‌ ರುಕ್ಸಾನಾಳದನ್ನ ಹತ್ಯೆ ಮಾಡಿದ್ದಾನೆ. 

Malenadu Today

ವಾದಿ ಏ ಹುದಾ ಬಡಾವಣೆಯ, ಸೆಕೆಂಡ್‌ ಮೇನ್‌ನಲ್ಲಿ ಬರುವ ಐದನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಯೂಸುಪ್‌ ತನ್ನ ಪತ್ನಿಯನ್ನ ಕೊಲೆ ಮಾಡಿರುವುದಾಗಿ ಎಸ್‌ಪಿ ಮಿಥುನ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.ಎಸಿ ಮೆಕಾನಿಕ್‌ ಆಗಿರುವ ಯೂಸುಫ್‌ ತನ್ನ ಪತ್ನಿಯನ್ನ ಕೊಲೆ ಮಾಡಲು ಆತನ ಸಂಬಂಧಿಕರು ಹಾಗೂ ಪತ್ನಿಯ ಕಡೆಯವರು ಹಾಗೂ ಸ್ಥಳೀಯರು ತಮ್ಮದೆ ಆದ ಕಾರಣಗಳನ್ನ ಹೇಳುತ್ತಿದ್ದು, ಸದ್ಯ ತುಂಗಾನಗರ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

SUMMARY | husband murdered his wife in the Wadi A Huda area under the jurisdiction of Tunganagar police station in Shivamogga.

KEY WORDS | husband murdered his wife , Wadi A Huda area, Tunganagar police station ,Shivamogga.

Share This Article