ಅಪ್ಪನ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ ಮಗಳಿಗೆ ಎದುರಾದ ಜವರಾಯ | ಸಾವಿಗೆ ಸಾವಿರ ದಾರಿ |

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌  

ಬಸ್‌ಸ್ಟಾಪ್‌ಗೆ ಅಪ್ಪನ ಬೈಕ್‌ನಲ್ಲಿ ಡ್ರಾಪ್‌ ತೆಗೆದುಕೊಳ್ಳುತ್ತಿದ್ದಾಗ 22 ವರ್ಷದ ಯುವತಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಬೆಂಗಳೂರಿನಲ್ಲಿ (Bengaluru)  ಇಂಟರ್ಟನ್‌ ಶಿಪ್‌ ಗೆ ತೆರಳಲು ಅಪ್ಪನ ಬೈಕ್‌ನಲ್ಲಿ ಯುವತಿ ಯೋಗಿತಾ ಡ್ರಾಫ್‌ ತೆಗದುಕೊಳ್ಳುತ್ತಿದ್ದಳು. ಬಸ್‌ ಸ್ಟ್ಯಾಂಡ್‌ಗೆ ಹೋಗುವ ದಾರಿಯಲ್ಲಿ ಎಂಜಿ ರಸ್ತೆಯ ಬಳಿ ಕ್ಯಾಂಟರ್‌ವೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಹಿಂದೆ ಕುಳಿತಿದ್ದ ಯೋಗಿತಾ ಕೆಳಕ್ಕೆ ಬಿದ್ದಿದ್ದು ಆಕೆಯ ತಲೆಗೆ ತೀವ್ರ ಪೆಟ್ಟಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಇನ್ನೂ ಎದುರಿಗೆ ಅಡ್ಡಬಂದ ಪಾದಚಾರಿಯೊಬ್ಬನನ್ನ ಅವೈಡ್‌ ಮಾಡಲು ಹೋಗಿ ಕ್ಯಾಂಟರ್‌ ಸ್ಟೇರಿಂಗ್‌ನ್ನ ಡ್ರೈವರ್‌ ಇನ್ನೊಂದು ಬದಿಗೆ ಎಳೆದಿದ್ದರಿಂದ ಕ್ಯಾಂಟರ್‌ ಬೈಕ್‌ಗೆ ಡಿಕ್ಕಿಯಾಗಿದೆ. ಇದೀಗ ತಂದೆ ಮಗಳನ್ನ ಕಳೆದುಕೊಂಡು ತೀರಾ ದುಃಖದಲ್ಲಿದ್ದಾರೆ.

ಇನ್ನೊಂದು ಘಟನೆಯಲ್ಲಿ ಶಿವಮೊಗ್ಗದ ಆಗುಂಬೆ ಸಮೀಪ ಕಾರೊಂದು ಅಪಘಾತಕ್ಕೀಡಾದ ಬಗ್ಗೆ ವರದಿಯಾಗಿದೆ. ಮಣಿಪಾಲದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಇಲ್ಲಿನ ಕೊಳಿಗೆ ಬಿಳುವೆಮನೆ ಬಳಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ. ಆಗುಂಬೆ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

SUMMARY | Chikkaballapur City, Agumbe Ghati, Shivamogga, Thirthahalli Taluk, accident, Manipal to Shivamogga, young woman dies while father was taking draf on bike

KEY WORDS | Chikkaballapur City, Agumbe Ghati, Shivamogga, Thirthahalli Taluk, accident, Manipal to Shivamogga,  

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor