ಸಾಗರದ ಹೊಸಕೊಪ್ಪ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್: ಏಣಿ ಬಳಸಿ ಪ್ರಯಾಣಿಕರ ರಕ್ಷಣೆ

ಹಂಚಿಕೊಳ್ಳಿ
WhatsApp Facebook X Telegram
ಹೊಸಕೊಪ್ಪದ ಬಳಿ ಖಾಸಗಿ ಬಸ್_ ಪಲ್ಟಿ
ಹೊಸಕೊಪ್ಪದ ಬಳಿ ಖಾಸಗಿ ಬಸ್_ ಪಲ್ಟಿ

ಮಲೆನಾಡು ಟುಡೆ ಸುದ್ದಿ / ಸಾಗರ: ಸಾಗರ ತಾಲೂಕಿನ ಹೊಸಕೊಪ್ಪದ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.

ಖಾಸಗಿ ಬಸ್ಸೊಂದು ಕೊಲ್ಲೂರಿನಿಂದ ಸಿಗಂದೂರಿನ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಸಕೊಪ್ಪದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗಳ ಮೇಲೆ ಪಲ್ಟಿಯಾಗಿದೆ. ಬಸ್ ಬಿದ್ದ ರಭಸಕ್ಕೆ ಎರಡು ಮನೆಗಳು ಜಖಂಗೊಂಡಿವೆ. ಅಪಘಾತದಲ್ಲಿ ಬಸ್ಸಿನಲ್ಲಿದ್ದ ದಾವಣಗೆರೆ ಮೂಲದ ಹಲವು ಗಾರ್ಮೆಂಟ್ಸ್ ನೌಕರರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಭಾರತ್ ಜೋಡೋ ಯಾತ್ರೆ 2.0

ಅಪಘಾತದ ತಕ್ಷಣ ಸ್ಥಳೀಯರು ಏಣಿಯನ್ನು ಬಳಸಿ ಬಸ್ಸಿನಲ್ಲಿದ್ದ ಗಾಯಾಳುಗಳನ್ನು ಕೆಳಗಿಳಿಸಿ ರಕ್ಷಣೆ ಮಾಡಿದರು. ಗಾಯಗೊಂಡವರನ್ನು ತಕ್ಷಣವೇ ತುಮರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor