SHIVAMOGGA | MALENADUTODAY NEWS | ಮಲೆನಾಡು ಟುಡೆ Dec 1, 2024
ದೇಶಿಯ ಕ್ರಿಕೆಟ್ ವಲಯದಲ್ಲಿ ಶಿವಮೊಗ್ಗಕ್ಕೆ ನಿಧಾನವಾಗಿ ದೊಡ್ಡ ದೊಡ್ಡ ಹೆಜ್ಜೆಗಳನ್ನ ಇಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರಾಜ್ಯದ ಅಂಡರ್ 19 ತಂಡಕ್ಕೆ ಶಿವಮೊಗ್ಗ ವಲಯದ ಲೋಹಿತ್ ಎಸ್ ಆಯ್ಕೆಯಾಗಿದ್ದರು. ಇದೀಗ ಮತ್ತೊಬ್ಬ ಶಿವಮೊಗ್ಗದ ಕ್ರೀಡಾಪುಟು ಜಿಲ್ಲೆಗೆ ಹೆಮ್ಮೆ ಮೂಡಿಸಿದ್ದಾರೆ. ಕರ್ನಾಟಕ ರಾಜ್ಯ ಸೀನಿಯರ್ಸ್ ಮಹಿಳೆಯರ ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಕುಮಾರಿ ಅಧಿತಿ ಆರ್ ಆಯ್ಕೆಯಾಗಿದ್ದಾರೆ.
ಇದೇ ಡಿಸೆಂಬರ್ 4 ರಿಂದ ಡಿಸೆಂಬರ್ 16 ವರೆಗೂ ಹರಿಯಾಣದಲ್ಲಿ ಬಿಸಿಸಿಐ ರಾಷ್ಟ್ರೀಯ ಮಟ್ಟದ ಸೀನಿಯರ್ಸ್ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಗಳಿ ಹಮ್ಮಿಕೊಂಡಿದೆ. ಈ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡದ ಪಾಲ್ಗೊಳ್ಳುತ್ತಿದೆ. ತಂಡದ ಆಟಗಾರರ ಆಯ್ಕೆ ಪಟ್ಟಿ ಪ್ರಕಟವಾಗಿದ್ದು ಶಿವಮೊಗ್ಗದ ಅಧಿತಿ ಆರ್ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ, ಅಂತರಾಷ್ಟ್ರೀಯ ಕ್ರೀಡಾಪಟು ವೇದಾ ಕೃಷ್ಣಮೂರ್ತಿ ಕರ್ನಾಟಕ ತಂಡವನ್ನು ಮುನ್ನೆಡಸಲಿದ್ದಾರೆ.
SUMMARY | Kumari Aditi R from Shivamogga has been selected for the Karnataka State Senior Women’s Cricket Team.
KEY WORDS | Kumari Aditi R from Shivamogga, ,Karnataka State Senior Women’s Cricket Team