ಅಂಡರ್ 19 ಕ್ರಿಕೆಟ್ ಟೀಂಗೆ ಸೆಲೆಕ್ಟ ಆದ ಶಿವಮೊಗ್ಗದ ಲೋಹಿತ್ S
Lohith S, son of Shivakumar and Nagarathna, residents of Harige in Shivamogga, has been selected for the Karnataka team for the Under-19 cricket tournament slated to be held in Nepal.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಶಿವಮೊಗ್ಗ | ಇಲ್ಲಿನ ಯವ ಕ್ರಿಕೆಟಿಗ ಮತ್ತೊಮೆ ಸುದ್ದಿಯಲ್ಲಿದ್ದಾನೆ. ಈ ಹಿಂದೆ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯದ ಅಂಡರ್ 19 ನಲ್ಲಿ ಸ್ಥಾನ ಪಡೆದಿದ್ದ ಲೋಹಿತ್ ಎಸ್ ಇದೀಗ ಮತ್ತೊಂದು ಟೂರ್ನಿಗಾಗಿ ತಂಡದಲ್ಲಿ ಸ್ಥಾನವನ್ನ ಭದ್ರಪಡಿಸಿಕೊಂಡಿದ್ದಾರೆ. ಆಲ್ ರೌಂಡರ್ ಆಟಗಾರನಾಗಿರುವ ಲೋಹಿತ್ ಆಯ್ಕೆ ಟೀಂ ಇಂಡಿಯಾ ಎಂಟ್ರಿಯ ಭರವಸೆಯ ಹೆಜ್ಜೆಗಳ ನಿರೀಕ್ಷೆಯನ್ನ ಮೂಡಿಸುತ್ತಿದೆ.
ಇದೇ ತಿಂಗಳು 13 ರಿಂದ 21ರ ವರೆಗೆ ನೇಪಾಳದಲ್ಲಿ ನಡೆಯಲಿರುವ 19 ವರ್ಷದೊಳಗಿನ ಪಂದ್ಯಾವಳಿಗಳಿಗೆ ಶಿವಮೊಗ್ಗದ ಹರಿಗೆ ನಿವಾಸಿ ಗಳಾದ ಶಿವಕುಮಾರ್ ಹಾಗೂ ನಾಗರತ್ನ ಇವರ ಪುತ್ರ ಲೋಹಿತ್ ಎಸ್ ಆಯ್ಕೆಯಾಗಿದ್ದಾರೆ.
ಓಡಿಶಾದ ಕಟಕ್ ನಲ್ಲಿ ನಡೆದ ರಾಷ್ಟ್ರೀಯ ಪಂಧ್ಯಾವಳಿಗಳಲ್ಲಿಯು ಲೋಹಿತ್ ಕರ್ನಾಟಕ ತಂಡದಿಂದ ಭಾಗವಹಿಸಿದ್ದರು. ಲೋಹಿತ್ ಎಸ್ ಪ್ರಸ್ತುತ ಡಿ.ವಿ.ಸ್ ಕಾಲೇಜ್ ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಕೋಚ್ ನಾಗರಾಜ್ ರವರಿಂದ ತರಬೇತಿ ಪಡೆಯುತಿದ್ದಾರೆ.
ನಗರದ ಪ್ರಖ್ಯಾತ ಕ್ಲಬ್ಬುಗಳಲ್ಲಿ ಒಂದಾದ FCC ತಂಡದ ಪರ ಪ್ರಥಮ ದರ್ಜೆಯ ಪಂದ್ಯಾವಳಿಗಳಲ್ಲಿ ಆಡುತ್ತಿದ್ದ ಲೋಹಿತ್ ರ ಸಾಧನೆಗೆ KSCA ಶಿವಮೊಗ್ಗ ವಲಯದ,ಅಧ್ಯಕ್ಷರು, ಸಂಚಾಲಕರು, ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ ಆಡಳಿತ ವರ್ಗ, ಸಹ್ಯಾದ್ರಿ ಕಾಲೇಜಿನ ಸಿಬ್ಬಂದಿ, ಎಫ್‌ಸಿಸಿ ಕ್ಲಬ್ ನ ಆಡಳಿತ ವರ್ಗ ನಗರದ ಎಲ್ಲಾ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳು ಅಭಿನಂದನೆಗಳೊಂದಿಗೆ ಇನ್ನು ಉತ್ತಮ ಸಾಧನೆ ಮಾಡಲೆಂದು ಹಾರೈಸಿದ್ದಾರೆ
SUMMARY | Lohith S, son of Shivakumar and Nagarathna, residents of Harige in Shivamogga, has been selected for the Karnataka team for the Under-19 cricket tournament slated to be held in Nepal.
KEYWORDS |Lohith S, son of Shivakumar and Nagarathna, Harige in Shivamogga, Karnataka team , Under-19 cricket tournament,