ವಿಕ್ರಂಗೌಡನ ಎನ್‌ಕೌಂಟರ್‌ | ಸಂಶಯಗಳಿಗೆ ಉತ್ತರಿಸಿದ ಡಿಜಿಪಿ ಪ್ರಣಬ್‌ ಮೊಹಂತಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024

ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಕಬ್ಬಿನಾಲೆಯ ಸಮೀಪದ ಪೀತ ಬೈಲ್‌ ಕಾಡಿನಲ್ಲಿ ನಡೆದ ಏನ್‌ಕೌಂಟರ್‌ ಪ್ರಕರಣದ ಸಂಬಂಧ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಪ್ರತಿಕ್ರಿಯಿಸಿದ್ದಾರೆ. ಈ ಎನ್‌ಕೌಂಟರ್‌ ನಕಲಿ ಎಂಬ ಸಂಶಯ ದಟ್ಟವಾದ ಬೆನ್ನಲ್ಲೆ ಅವರು ಸುದ್ದಿಗೋಷ್ಟಿ ನಡೆಸಿ, ಪ್ರಸ್ತುತ ಎದ್ದಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

ಪೀತಬೈಲ್‌ನಲ್ಲಿ ನಡೆದ ಘಟನೆ ಪೂರ್ವ ಯೋಜಿತ ಕೃತ್ಯವಲ್ಲ, ಅದು ನಕಲಿ ಎನ್‌ಕೌಂಟರ್‌ ಎನ್ನುವ ಆರೋಪ ಸುಳ್ಳು ಎಂದಿರುವ ಅವರು, ಕಳೆದ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಎನ್‌ಕೌಂಟರ್‌ ನಡೆದಿದೆ ಎಂಬುದನ್ನ ದೃಡಿಕರಿಸಿದರು. ಘಟನೆ ನಡೆದ ದಿನ ಆರು ಗಂಟೆ ಸುಮಾರಿಗೆ ANF ತಂಡ ಕೂಂಬಿಂಗ್‌ ನಡೆಸುವಾಗ ನಕ್ಸಲರ ತಂಡ ಮುಖಾಮುಖಿಯಾಗಿದೆ. ಈ ವೇಳೆ “ನಾವು ಪೊಲೀಸರು ಶರಣಾಗಿ” ಎಂದು ವಾರ್ನಿಂಗ್‌ ಮಾಡಲಾಗಿದೆ. ಪದೇ ಪದೇ ಈ ರೀತಿ ಹೇಳಿದಾಗಲೂ ನಕ್ಸಲರು ಪೈರ್‌ ಮಾಡಿದರು. ಈ ವೇಳೆ ಪ್ರತಿದಾಳಿ ನಡೆಸಲಾಗಿದೆ. ಶೂಟೌಟ್‌ನಲ್ಲಿ ವಿಕ್ರಂಗೌಡ ಸಾವನ್ನಪ್ಪಿದ್ದಾನೆ. ನಕ್ಸಲರ ಪೈಕಿ 2 ರಿಂದ 3 ಮಂದಿ ಫೈರ್‌ ಮಾಡುತ್ತಾ ಕಾಡಿನಲ್ಲಿ ಪರಾರಿಯಾದರು. ವಿಕ್ರಂಗೌಡನ ಮುಖ ಪರಿಚಯ ಇದ್ದಿದ್ದರಿಂದ ಆತನ ಗುರುತು ಪತ್ತೆಹಚ್ಚಲಾಗಿದೆ ಎಂದರು. 

ಈ ವೇಳೆ ಸಂಶಯಗಳಿಗೆ ಉತ್ತರಿಸಿದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ವಿಕ್ರಂಗೌಡ ಆ ಮನೆಯ ಬಳಿ ಏತಕ್ಕಾಗಿ ಬಂದಿದ್ದ ಎಂಬುದು ಗೊತ್ತಿಲ್ಲ. ಆಹಾರಕ್ಕಾಗಿ ಬಂದಿದ್ದನೋ ದಿನಸಿ ಪಡೆಯಲು ಬಂದಿದ್ದನೋ ಗೊತ್ತಿಲ್ಲ ಎಂದರು. 

ಈ ಕೂಂಬಿಂಗ್‌ ಕಾರ್ಯಾಚರಣೆಯ ವೇಳೆಯಲ್ಲಿ ಸ್ಥಳೀಯ ಮನೆಗಳಲ್ಲಿದ್ದವರನ್ನ ಮೊದಲೇ ಮನೆಯಿಂದ ಜಾಗ ಖಾಲಿ ಮಾಡಿಸಲಾಗಿತ್ತು ಎಂಬ ಆರೋಪ ಸಹ  ಕೇಳಿಬಂದಿತ್ತು. ಆದರೆ ಇದು ಸುಳ್ಳು ಯಾರನ್ನು ಮನೆಯಿಂದ ತೆರವುಗೊಳಿಸಿರಲಿಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್‌ ಮೊಹಂತಿ ತಿಳಿಸಿದ್ದಾರೆ. 

ಶರಣಾಗತಿಗೆ ಮೊದಲ ಆದ್ಯತೆ ಎಂದ ಹಿರಿಯ ಅಧಿಕಾರಿ ಕಳೇದ ಮಾರ್ಚ್‌ನಿಂದ ನಕ್ಸಲ್‌ ಮೂಮೆಂಟ್‌ ಇದೆ. ಹೊರರಾಜ್ಯದವರಲ್ಲ ಬದಲಾಗಿ ಸ್ಥಳೀಯ ನಕ್ಸಲರ ಮೂಮೆಂಟ್‌ ಇದ್ದು, ಕೂಂಬಿಂಗ್‌ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದರು. 

SUMMARY | DGP (Internal Security) Pranab Mohanty informs about Vikram Gowda’s encounter

KEY WORDS |DGP Internal Security , Pranab Mohant , Vikram Gowda encounter

Share This Article