ವರಾಹಿ ಹಿನ್ನೀರಿಗೆ ಹಾರಿ ಜೀವ ಕಳೆದುಕೊಂಡ 30 ರ ಹರೆಯದ ಯುವಕ! ನಡೆದಿದ್ದೇನು?

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೈಮರ ಸಮೀಪದ ಹಾಗಲಮನೆ ನಿವಾಸಿಯ ಯುವಕ 30 ವರ್ಷದ ಕೌಶಿಕ್‌ ಎಂಬಾತ ವರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿ ಬಂದಿದೆ. ಘಟನೆಗೆ ಸಾಲಭಾದೆ ಕಾರಣ ಎನ್ನಲಾಗುತ್ತಿದ್ದು, ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಇಲ್ಲಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಾಗಲಮನೆ ವಾಸಿ ಕೌಶಿಕ್‌ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದು, ಕೃಷಿ ಕೆಲಸ ಮಾಡಿಕೊಂಢಿದ್ದ.  ಕೃಷಿ ಚಟುವಟಿಕೆಗಾಗಿ ವಿವಿದೆಡೆ ಸಾಲ ಮಾಡಿದ್ದ ಕೌಶಿಕ್‌ಗೆ ಅದನ್ನು ತೀರಿಸುವ ದಾರಿ ಕಾಣದೆ, ತನ್ನ ಜೀವನ ಅಂತ್ಯಗೊಳಿಸಿದ್ದಾನೆ ಎನ್ನಲಾಗುತ್ತಿದೆ. ಮೇಲಾಗಿ ಅಡಿಕೆಗೆ ಕಾಣಿಸಿಕೊಂಡ ರೋಗ ಹಾಗೂ ಇಳುವರಿ ಸಮಸ್ಯೆಯಿಂದ ಸಾಲ ತೀರಿಸಲು ಆಗದೆ ಕೌಶಿಕ್‌ ಪರದಾಡುತ್ತಿದ್ದ . ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿಬಹುದು ಎನ್ನಲಾಗುತ್ತಿದೆ.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು