SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ರಾಣೆ ಬೆನ್ನೂರುನಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಶಿವಮೊಗ್ಗ ನಗರದ ವಿನೋಬನಗರ ನಿವಾಸಿಯೊಬ್ಬನನ್ನು ಬಂಧಿಸಲಾಗಿದೆ. ಇಲ್ಲಿನ ಶಹರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ವಿನೋಬ ನಗರದ ನಿವಾಸಿ ಫುಕರಾಜ್ ಉರ್ಪ್ ಗೌತಂರಾಜ ಎಂಬವರನ್ನು ಬಂಧಿಸಲಾಗಿದೆ. ಈತ ಕಳೆದ ಜನವರಿ 7 ರಂದು ರಾಣೆಬೆನ್ನೂರಿನ ಮನೆಯೊಂದರಲ್ಲಿ ಕಳ್ಳತನ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದನು.
ಈ ಹಿನ್ನೆಲೆಯಲ್ಲಿ ಆರೋಪಿಯ ಪತ್ತೆಗಾಗಿ ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದಲ್ಲಿ ಒಂದು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ದಾವಣಗೆರೆ ನಿಟವಳ್ಳಿ ಬಳಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದೆ. ಆರೋಪಿಯು ವಿಚಾರಣೆ ವೇಳೆ ನಗರದಲ್ಲಿ ತಾನು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ದಾವಣಗೆರೆಯ ಒಂದು ಸ್ಥಳದಲ್ಲಿ ಮುಚ್ಚಿ ಇಟ್ಟಿರುವುದಾಗಿ ಮತ್ತು ತನ್ನ ಖರ್ಚಿಗೆ ಕೆಲವೊಂದು ಸಣ್ಣ ಪುಟ್ಟ ಆಭರಣಗಳನ್ನು ದಾರಿಹೊಕರಿಗೆ ಮಾರಿರುವುದಾಗಿ ಬಾಯಿಬಿಟ್ಟಿದ್ದಾನೆ. ಬಂಧಿತನಿಂದ ಒಂದು ಜೊತೆ ಬಂಗಾರದ ಕರಿಮಣಿ ಬಳೆ, ಬಂಗಾರದ ಬಳೆ, ಬಂಗಾರದ ಮುತ್ತಿನ ಸರ, ಬಂಗಾರದ ಬ್ರಾಸ್‌ಲೆಟ್ ಸೇರಿದಂತೆ ವಿವಿಧ ಆಭರಣಗಳನ್ನು ಜಪ್ತಿ ಮಾಡಲಾಗಿದೆ.