ಯುಗಾದಿ ಹಬ್ಬಕ್ಕೆ GOOD NEWS | ಸಿಗಂದೂರು ಸೇತುವೆ ಕಡೆಯ 604 ನೇ ಸೆಗ್ಮೆಂಟ್‌ ಜೋಡಣೆ | ಹೇಗಿತ್ತು ನೋಡಿ ಕಾಮಗಾರಿ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 30, 2025 ‌‌ ‌

ಮಲೆನಾಡಿನ ಹೆಮ್ಮೆಯ ಸೇತುವೆಯಾಗಲಿರುವ ಸಿಗಂದೂರು ಕೇಬಲ್‌ ಬ್ರಿಡ್ಜ್‌ ಕಾಮಗಾರಿ ನಿನ್ನೆಗೆ ಅಧಿಕೃತವಾಗಿ ಕ್ಲೈಮ್ಯಾಕ್ಸ್‌ ತಲುಪಿದೆ. ನಿನ್ನೆದಿನ ಸೇತುವೆ ಕಡೆಯ ಸೆಗ್ಮೆಂಟ್‌ 604 ನೇ ಸೆಗ್ಮೆಂಟ್‌ ಜೋಡಣೆ ಕಾರ್ಯ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಸ್ಮೆಗ್ಮೆಂಟ್‌ಗೆ ವಿಶೇಷ ಪೂಜೆ ನಡೆಸಿ ಕಾಮಗಾರಿಯನ್ನು ಕೈಗೊಳ್ಳಲಾಯಿತು. 

Malenadu Today

ಸಂಜೆ ಹೊತ್ತಿಗೆ ಸೆಗ್ಮೆಂಟ್‌ ಜೋಡಣೆ ಆರಂಭವಾಗಿ ರಾತ್ರಿಹೊತ್ತಿಗೆ ಮುಕ್ತಾಯ ಕಂಡಿದೆ. ಈ ಮೂಲಕ ಸಿಗಂದೂರು ಸೇತುವೆ ಅಂಬಾರಗೋಡ್ಲುನಿಂದ ಸಿಗಂದೂರು ತುದಿಯವರೆಗೂ ಪೂರ್ತಿ ಜೋಡಣೆಯಾದಂತಾಗಿದೆ. 

Malenadu Today

ಇನ್ನೂ ಎ ಒನ್‌ ಅಂದರೆ ಅಂಬಾರಗೊಡ್ಲು ಬದಿಯಲ್ಲಿ ಸೇತುವೆಗೆ ಲಿಂಕ್‌ ಆಗಬೇಕಿದೆ.ಈ ಸಂಬಂಧ ರಸ್ತೆ ಕಾಮಗಾರಿಯು ಆರಂಭವಾಗಿದೆ. ಇನ್ನೂ ಸಿಗಂದೂರು ಕಡೆಯಿಂದ ಸೇತುವೆಗೆ ಸಂಪರ್ಕ ನೀಡಲಾಗಿದೆ. 

Malenadu Today

ಉಳಿದಂತೆ ಡಾಂಬರೀಕರಣ, ಲೈಟಿಂಗ್‌ ಹಾಗೂ ಇತರೆ ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಿದ್ದು, ಹಬ್ಬದ ಮುಗಿದ ಬೆನ್ನಲ್ಲೆ ಉಳಿದ ಕೆಲಸಗಳು ನಡೆಯಲಿದೆ. ಮೇ ಅಂತ್ಯದ ಹೊತ್ತಿಗೆ ಅಥವಾ ಜೂನ್‌ ಮೊದಲ ವಾರದಲ್ಲಿ ಸೇತುವೆ ಕಾಮಗಾರಿ ಕಂಪ್ಲೀಟ್‌ ಆಗಲಿದ್ದು, ಉದ್ಧಾಟನೆಗೆ ಸಿದ್ದಗೊಳ್ಳಲಿದೆ. 

Malenadu Today

ಇನ್ನೂ ನಿನ್ನೆದಿನ ಕೊನೆಯ ಸೆಗ್ಮೆಂಟ್‌ ಅಳವಡಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೊನೆಯ ಸ್ಮೆಗ್ಮೆಂಟ್‌ಗೆ ಪೂಜೆ ಸಲ್ಲಿಸಿದರು. ಈ ವೇಳೆ ವಿವಿಧ ಅಧಿಕಾರಿಗಳು ಕಾಮಗಾರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 

Malenadu Today

Malenadu Today

ʼ

Share This Article