SHIVAMOGGA| MALENADUTODAY NEWS | ಮಲೆನಾಡು ಟುಡೆ Mar 8, 2025
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೋಣಂದೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಚಿಕ್ಕಮಗಳೂರು ಜಿಲ್ಲೆ ಹರಿಪುರದ ಮಠದ ಸ್ವಾಮೀಜಿ ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದಾರೆ.
ನಿನ್ನೆ ಕೋಣಂದೂರು ಸಮೀಪದ ಕೋಟೆಗದ್ದೆ ಬಳಿಯಲ್ಲಿ ಕಾರುಗಳ ನಡುವೆ ಸರಣಿ ಅಪಘಾತವಾಗಿದೆ. ಘಟನೆಯಲ್ಲಿ ಕಾರುಗಳು ಜಖಂಗೊಂಡಿದ್ದು, ಸ್ವಾಮೀಜಿಗಳು ಆರಾಮಗಿದ್ದಾರೆ.
ನಡೆದಿದ್ದು ಹೇಗೆ?
ಹರಿಹರಪುರ ಮಠದ ಸ್ವಾಮೀಜಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ಶಿರಸಿಯಲ್ಲಿ ನಿಗದಿಯಾಗಿದ್ದ ದಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಿಕ್ಕಮಗಳೂರಿನಿಂದ ಕೋಣಂದೂರು ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಸ್ವಾಮೀಜಿಗೆ ಎಸ್ಕಾರ್ಟ್ ನೀಡುತ್ತಿದ್ದ ಕಾರಿಗೆ ದನವೊಂದು ಅಡ್ಡಬಂದಿದೆ. ಅದಕ್ಕೆ ಡಿಕ್ಕಿಯಾಗುವುದನ್ನು ತಡೆಯಲು ಎಸ್ಕಾರ್ಟ್ ವಾಹನದ ಚಾಲಕ ಬ್ರೇಕ್ ಹಾಕಿದ್ದರು. ಇದು ಗೊತ್ತಾಗದೇ, ಈ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ಶ್ರೀಗಳು ಕುಳಿತಿದ್ದ ಕಾರು, ಎಸ್ಕಾರ್ಟ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಶ್ರೀಗಳ ಕಾರಿಗೆ ಹಿಂದೆ ಬರುತ್ತಿದ್ದ ಮಠದ ಮತ್ತೊಂದು ಕಾರು ಗುದ್ದಿದೆ.