SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 23, 2024
ಶಿವಮೊಗ್ಗ | ಬಂಧನದಿಂದ ಹೊರಬಂದ ಸಿಟಿ ರವಿಯವರು ತಮ್ಮನ್ನು ಹೀರೋ ಅಂದುಕೊಂಡಿದ್ದರು. ಆದರೆ ಆಂಬುಲೆನ್ಸ್‌ಗಳ ನಡುವೆ ಅವರನ್ನು ರೋಗಗ್ರಸ್ಥ ವ್ಯಕ್ತಿಯ ರೀತಿಯಲ್ಲಿ ಸ್ವಾಗತಿಸಲಾಗಿದೆ. ಈ ಮೂಲಕ ಅವರ ಮಾನಸಿಕತೆಯನ್ನು ಅವರಿಗೇನೆ ಅರ್ಥೈಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಟೀಕಿಸಿದರು. ಇಂದು ನಗರದ ಪ್ರತಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆಯನೂರು ಮಂಜುನಾಥ್, ಮುಖಂಡ ಸಿಟಿ ರವಿ ಲಕ್ಷ್ಮಿಹೆಬ್ಬಾಳ್ಕರ್ ವಿರುದ್ಧ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಖಂಡಿಸಿದರು. ದೇಶದ ಅತ್ಯಂತ ಹಳೆಯ ವ್ಯವಸ್ಥೆಯಾದ ವಿಧಾನಪರಿಷತ್‌ನಲ್ಲಿ ನಡೆಯಬಾರದ ಘಟನೆ ನಡೆದಿದೆ. ಸಿ ಟಿ ರವಿಯವರು ಒಂದು ಬಹಳ ದೊಡ್ಡ ಜನಾಂಗದ ನಾಯಕಿ ಲಕ್ಷೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಬಳಸಿದ್ದಾರೆ. ಆದರೆ ಬಿಜೆಪಿಯವರು ಸಿ.ಟಿ ರವಿಯವರ ಹೇಳಿಕೆ ಖಂಡಿಸೋದನ್ನ ಬಿಟ್ಟು ಹೂಮಳೆ ಸುರಿಸಿ ಸ್ವಾಗತ ಕೋರಿದ್ದಾರೆ.
ಸಿ.ಟಿ ರವಿ ಬಾಯಲ್ಲಿ ಅಶ್ಲೀಲ ಪದವನ್ನು ನಾನು ನಿರೀಕ್ಷಿಸಿರಲಿಲ್ಲ. ಸಿ.ಟಿ ರವಿ ಯವರಿಗೆ ಈ ಅಭ್ಯಾಸ ಮೊದಲಿಂದಲೂ ಇದೆ. ನಿತ್ಯಸುಮಂಗಲಿ ಎನ್ನುವ ಹೇಳಿಕೆಯನ್ನು ಈ ಹಿಂದೆಯೂ ಸಾಕಷ್ಟು ಸಲ ನೀಡಿದ್ದರು. ಪ್ರಚಾರದ ಗೀಳು ನಿತ್ಯ ಸುದ್ದಿಯಲ್ಲಿರಬೇಕು ಎಂಬ ಕಾರಣದಿಂದ ಸಿ ಟಿ ರವಿ ಈ ತರಹದ ಹೇಳಿಕೆ ನೀಡಿದ್ದಾರೆ. ಅಶ್ಲೀಲ ಪದದ ಕುರಿತು ನನ್ನ ಬಳಿ ಆಡೀಯೋ ಇದೆ. ಅಶ್ಲೀಲ ಪದ ಬಳಕೆ ಮಾಡಿರೋದಕ್ಕೆ ಬಿಜೆಪಿಯವರು ಕ್ಷಮೆ ಕೇಳಬೇಕಿತ್ತು. ಆದರೆ ಇಂತಹ ಹೇಳಿಕೆಯ ಬಗ್ಗೆ ಬಿಜೆಪಿಯವರು ಒಂದು ಮಾತಾಡಿಲ್ಲ. ಆದರೆ ಸಿ ಟಿ ರವಿಯನ್ನ ಯೋಧನ ರೀತಿಯಲ್ಲಿ ವೈಭವಿಕರಿಸುತ್ತಿರುವುದು ವಿಪರ್ಯಾಸ ಎಂದರು.
ಹಾಗೆಯೇ ಪೊಲೀಸರು ಸಿಟಿ ರವಿಯವರನ್ನು ಎನ್ ಕೌಂಟರ್ ಮಾಡಲು ಕರೆದುಕೊಂಡು ಹೊಗುತ್ತಿದ್ದರು ಎನ್ನವ ಮೂಲಕ ತಮ್ಮನ್ನ ತಾವೇ ವೈಭವಿಕರಿಸಿಕೊಳ್ಳುತ್ತಿದ್ದಾರೆ. ಹುತಾತ್ಮ ವೀರನಾಗಲು ಸಿಟಿ ರವಿ ಹೊರಟಿದ್ದಾರೆ. ಸಿಟಿ ರವಿ ಬೆಳಗಾವಿ ಪೊಲೀಸರಿಗೆ ಋಣಿಯಾಗಿರಬೇಕು ಏಕೆಂದರೆ ಸಿ ಟಿ ರವಿಯವರನ್ನು ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದರೆ ಅವರ ಮೇಲೆ ದಾಳಿ ಆಗುವ ಸಾದ್ಯತೆ ಇತ್ತು. ಆದ್ದರಿಂದ ಪೊಲೀಸರು ಅವರನ್ನು ಬೇರೆ ಬೇರೆ ಕಡೆ ತಗೆದುಕೊಂಡು ಹೋಗಿದ್ದಾರೆ. ಪೊಲೀಸರಿಗೆ ಸಿ.ಟಿ ರವಿಯವರನ್ನು ಎನ್ಕೌಂಟರ್ ಮಾಡುವ ಉದ್ದೇಶ ಇದ್ದಿದ್ದರೆ ಅವರನ್ನು ಹಳ್ಳಿ ಹಳ್ಳಿ ಸುತ್ತಿಸುತ್ತಿರಲಿಲ್ಲ ಸುಮ್ಮನೆ ಬಿಟ್ಟಿದ್ದರೆ ಸಾಕಿತ್ತು. ಸುಮ್ಮನೆ ರಕ್ಷಣೆ ಕೊಟ್ಟ ಪೊಲೀಸರ ಮೇಲೆ ಟೀಕೆ ಮಾಡುವುದು ಸರಿಯಲ್ಲ ಎಂದರು.
ದೇಶದ ಸೌಹಾರ್ದತೆ ವಿಚಾರದಲ್ಲಿ ಭಾಗವತ್ ಅವರು ಮಸೀದಿಗಳಲ್ಲಿ ಮಂದಿರ ಹುಡುಕುವು ನಿಲ್ಲಿಸಿ ಎಂದಿದ್ದಾರೆ
ದೇಶದ ಸೌಹಾರ್ದತೆ ವಿಚಾರದಲ್ಲಿ ಆರ್‌ಎಸ್‌ಎಸ್ ನ ಹಿರಿಯ ಮುಖಂಡ ಮೋಹನ್ ಭಾಗವತ್ ಅವರು ಎಲ್ಲಾ ಮಸೀದಿಗಳಲ್ಲಿ ಮಂದಿರವನ್ನು ಹುಡುಕುವುದು ನಿಲ್ಲಿಸಿ ಎಂದಿದ್ದಾರೆ. ಇದು ಬಹಳ ಸಕಾಲಿಕ ಹೇಳಿಕೆ ಇದನ್ನು ನಾನು ಸ್ವಾಗತಿಸುತ್ತೇನೆ ಎಂದರು. ಅಯೋಧ್ಯೆಯ ನಂತರ ಎಲ್ಲಾ ಮಸೀದಿಗಳಲ್ಲಿ ದೇವರ ವಿಗ್ರಹ ಇದೆ ಎನ್ನುವುದನ್ನ ಹುಡುಕಿ ತೆಗೆಯುವ ಪ್ರಯತ್ನ ನಡೆಯುತ್ತಿತ್ತು. ಈ ನಿಟ್ಟಿನಲ್ಲಿ ಮೋಹನ್ ಭಾಗವತ್‌ರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ.ಈ ಹೇಳಿಕೆಯಿಂದ ರಾಷ್ಟ್ರಭಕ್ತರ ದೇಶಭಕ್ತರ ಹೆಸರಿನಲ್ಲಿ ಪ್ರಚೋಧನೆ ಮಾಡುವವರ ಹೇಳಿಕೆ ನಿಲ್ಲುತ್ತೆ ಭಾವಿಸುತ್ತೇನೆ
SUMMARY | A sick man was welcomed by the people of Chikmagalur with a siren in an ambulance. KPCC spokesperson Ayanur Manjunath lashed out at CT Ravi, saying that people have made him understand the mentality of CT Ravi.
KEYWORDS | Chikmagalur, KPCC, Ayanur Manjunath, CT Ravi,