SHIVAMOGGA | MALENADUTODAY NEWS | ಮಲೆನಾಡು ಟುಡೆ Dec 15, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅರಳಗೋಡು ರಸ್ತೆ ತಿರುವಿನಲ್ಲಿ ಮಂಗಳೂರಿನಿಂದ ಜೋಗಕ್ಕೆ ಬಂದಿದ್ದ ಟೂರಿಸ್ಟ್ ಬಸ್‌ವೊಂದು ಅಪಘಾತಕ್ಕೀಡಾಗಿದೆ. ಕಾರ್ಗಲ್ ಸಮೀಪ ಈ ಘಟನೆ ಸಂಭವಿಸಿದ್ದು. ಘಟನೆಯಲ್ಲಿ 15 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ಪ್ರಾಥಮಿಕ ಮಾಹಿತಿ ಗೊತ್ತಾಗಿದೆ.
ಇಲ್ಲಿನ ಅರಳಗೋಡು ರಸ್ತೆ ಟರ್ನಿಂಗ್‌ನಲ್ಲಿ ಘಟನೆ ಸಂಭವಿಸಿದೆ. ಬಸ್‌ನಲ್ಲಿ 55 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ಟರ್ನಿಂಗ್‌ನಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನ ಕಾರ್ಗಲ್ ಹಾಗೂ ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ.
SUMMARY | A tourist bus coming from Mangalore to Joga met with an accident at the Aralogodu road turning near Kargal in Sagar taluk of Shimoga district.
KEY WORDS |A tourist bus from Mangalore, joga, Aralogodu road , Kargal in Sagar taluk