ಬ್ಯಾಂಕ್‌ APK ಲಿಂಕ್‌ ಕ್ಲಿಕ್‌ ಮಾಡಿದ ಕೆಲವೇ ಹೊತ್ತಿನಲ್ಲಿ ಎದುರಾಯ್ತು ಶಾಕ್

Kargal police station, cyber crime, bank APK link , Sagar taluk of Shivamogga district

ಬ್ಯಾಂಕ್‌ APK ಲಿಂಕ್‌ ಕ್ಲಿಕ್‌ ಮಾಡಿದ ಕೆಲವೇ ಹೊತ್ತಿನಲ್ಲಿ ಎದುರಾಯ್ತು ಶಾಕ್
Kargal police station, cyber crime, bank APK link , Sagar taluk of Shivamogga district

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024

ಸಾಗರ | ಮೊಬೈಲ್‌ಗೆ ಕಳುಹಿಸಿದ ಆನ್‌ಲೈನ್‌ ಲಿಂಕ್‌ವೊಂದನ್ನ ಕ್ಲಿಕ್‌ ಮಾಡಿದ ಬೆನ್ನಲ್ಲೆ ಬ್ಯಾಂಕ್‌ ಅಕೌಂಟ್‌ನಿಂದ ₹ 27,802 ರೂಪಾಯಿ ಕಟ್‌ ಆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯಲ್ಲಿ ವರದಿಯಾಗಿದೆ. 

ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ನಿವಾಸಿಯೊಬ್ಬರ ಮೊಬೈಲ್‌ಗೆ  ಕೆನರಾ ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಲಿಂಕ್‌ವೊಂದು ಬಂದಿದೆ. ಇದನ್ನ ಕ್ಲಿಕ್‌ ಮಾಡಿದ ಬಳಿಕ ಅವರ ಅಕೌಂಟ್‌ನಿಂದ ಹಣ ಬೇರೊಂದು ಖಾತೆಗೆ ವರ್ಗಾವಣೆ ಆಗಿದೆ. 

ಇತ್ತೀಚೆಗೆ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಕೆಲವರ ಅಕೌಂಟ್‌ಗಳ ಮೂಲಕ ವಿವಿಧ ಬ್ಯಾಂಕ್‌ ಹೆಸರಿನ APK ಫೈಲ್‌ಗಳನ್ನ ಕಳುಹಿಸಿ, ವಿವಿಧ ಆಫರ್‌ಗಳನ್ನ ನೀಡಿ ಅದರ ಮೇಲೆ ಕ್ಲಿಕ್‌ ಮಾಡುವಂತೆ ಹೇಳಲಾಗುತ್ತದೆ. ಹಾಗೆ ಕ್ಲಿಕ್‌ ಮಾಡಿದರೇ , ನಿಮ್ಮ ಅನುಮತಿಯೇ ಇಲ್ಲದೆ ಮೊಬೈಲ್‌ಗಳಿಂದಲೇ ಬ್ಯಾಂಕ್‌ ಖಾತೆಗೆ ಕನ್ನ ಹಾಕುತ್ತಾರೆ. ಈ ಬಗ್ಗೆ ಈಗಾಗಲೇ ಇಲಾಖೆ ಎಚ್ಚರಿಸಿದೆ. 

ಇದೀಗ ಅಂತಹುದ್ದೆ ಘಟನೆಯೊಂದು ತುಮರಿಯ ಬಳಿ ನಡೆದಿದೆ. ಈ ಬಗ್ಗೆ ಕಾರ್ಗಲ್‌ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.

SUMMARY | Kargal police station, cyber crime, bank APK link , Sagar taluk of Shivamogga district

KEY WORDS | Kargal police station, cyber crime, bank APK link , Sagar taluk of Shivamogga district