SHIVAMOGGA | MALENADUTODAY NEWS | ಮಲೆನಾಡು ಟುಡೆ Jan 26, 2025
ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಸಿಗುವ ಮೀನುಗಳು ವಿಶೇಷವಾಗಿರುತ್ತವೆ. ಅದರಲ್ಲಿಯು ಭಾನುವಾರದ ಬಾಡೂಟಕ್ಕೆ ಇಲ್ಲಿನ ಮೀನುಗಳಿಗೆ ಜಾಸ್ತಿನೇ ಡಿಮ್ಯಾಂಡ್ ಇರುತ್ತದೆ. ಪರಿಣಾಮವಾಗಿ ಮೀನು ವ್ಯಾಪಾರಸ್ಥರಿಗೆ ಬಲೆ ವಹಿವಾಟು ವೀಕೆಂಡ್‌ಗಳಲ್ಲಿ. ಸದ್ಯ ಈ ವಿಚಾರ ಏಕೆ ಅಂದರೆ, ಭದ್ರಾ ಬ್ಯಾಕ್ ವಾಟರ್‌ನಲ್ಲಿ (Bhadra Backwater)ನಿನ್ನೆ ದಿನ ಬರೊಬ್ಬರಿ 25 ಕೆಜಿ ತೂಕದ ಮೀನೊಂದು ಸಿಕ್ಕಿದೆ. ಈ ಮೀನು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
NRPURA ತಾಲ್ಲೂಕಿನ ಹೆಬ್ಬೆಯ ದೋಣಿ ಗುಂಡಿ ಸಮೀಪದಲ್ಲಿ 25 ಕೆ.ಜಿ.ತೂಕದ ಹದ್ದು ಮೀನು ಬಲೆಗೆ ಬಿದ್ದಿದೆ. ಈ ಮೀನು ಒಳ್ಳೆಯ ರೇಟಿಗೆ ವ್ಯಾಪಾರವೂ ಆಗಿದೆ.ಈ ಮೀನಿ ಕಲ್ಲು ಸುರ್ಗಿ ಎಂದು ಸಹ ಕರೆಯಲಾಗುತ್ತದೆಯಂತೆ.
SUMMARY | 25 kg eagle fish caught in net in Bhadra Dam backwater
KEY WORDS | 25 kg eagle fish , Bhadra Dam backwater